ಗಾಳಿ, ಮಳೆಗೆ 54 ಮನೆಗಳಿಗೆ ಹಾನಿ

18sirsi5
Published on

ವಿಜಯವಾಣಿ ಸುದ್ದಿಜಾಲ ಶಿರಸಿ

ತಾಲೂಕಿನ ವಿವಿಧೆಡೆ ಭಾನುವಾರ ಸುರಿದ ಭಾರಿ ಗಾಳಿ, ಮಳೆಯಿಂದಾಗಿ 54 ಮನೆಗಳಿಗೆ ಧಕ್ಕೆಯಾಗಿದ್ದು, 13.79 ಲಕ್ಷ ರೂ. ಹಾನಿಯಾಗಿದೆ ಎಂದು ಅಂದಾಜಿಸಲಾಗಿದೆ.

ನಗರದ ಅಗಸೆಬಾಗಿಲು ಹಾಗೂ ಗಾಂಧಿನಗರದಲ್ಲಿ 6 ಮನೆಗಳಿಗೆ ಹಾನಿಯಾಗಿ 2.60 ಲಕ್ಷ ರೂ. ನಷ್ಟವಾಗಿದೆ. ಶಿರಸಿ ಹೋಬಳಿಯ ಬ್ಯಾಗದ್ದೆ, ಅಚನಳ್ಳಿ, ಜವಳಗುಂಡಿ, ಲಂಡಕನಹಳ್ಳಿ, ಎಸಳೆ, ಕರೂರ, ಬರೂರು, ಗಡಿಹಳ್ಳಿಯಲ್ಲಿ ಕಚ್ಚಾಮನೆ, ವಾಸ್ತವ್ಯದ ಮನೆ ಹಾಗೂ ಮೇಲ್ಛಾವಣಿ ಹಾನಿ, ವಿದ್ಯುತ್ ಮೀಟರ್, ಕೊಟ್ಟಿಗೆ ಹಾಗೂ ಶೌಚಗೃಹಕ್ಕೆ ಹಾನಿಯಾಗಿದೆ. ಕಂದಾಯ ಇಲಾಖೆ ಸಿಬ್ಬಂದಿ ಸ್ಥಳ ಭೇಟಿ ನೀಡಿ ಮಾಹಿತಿ ಸಂಗ್ರಹಿಸಿದ್ದು, ಪ್ರಾಥಮಿಕ ಮಾಹಿತಿ ಪ್ರಕಾರ 11.19 ಲಕ್ಷ ರೂ. ಹಾನಿಯಾಗಿದೆ.

ಹೆಸ್ಕಾಂಗೆ ನಷ್ಟ: ಅಬ್ಬರದ ಗಾಳಿಗೆ ಬಿದ್ದ ಮರಗಳಿಂದ ಹೆಸ್ಕಾಂಗೆ ಭಾರಿ ನಷ್ಟವಾಗಿದೆ. ಕಳೆದೆರಡು ಮಳೆಗೆ 100ಕ್ಕೂ ಹೆಚ್ಚು ವಿದ್ಯುತ್ ಕಂಬಗಳು, ಟ್ರಾನ್ಸ್​ಫಾರ್ಮರ್​ಗಳು ಧರೆಗುರುಳಿ ಅಂದಾಜು 35 ಲಕ್ಷ ರೂ. ನಷ್ಟವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net