

ಹರಿಹರ: ನಗರದ ವಿಠ್ಠಲ ರುಕ್ಮಾಯಿ ದೇವಸ್ಥಾನದಲ್ಲಿ ಹಮ್ಮಿಕೊಂಡಿದ್ದ 52ನೇ ವರ್ಷದ ವಿಠ್ಠಲ ರುಕ್ಮಾಯಿ ದಿಂಡಿ ಮಹೋತ್ಸವ ಹಾಗೂ ನಾಮ ಸಪ್ತಾಹ ಕಾರ್ಯಕ್ರಮ ಶುಕ್ರವಾರ ವಿದ್ಯುಕ್ತವಾಗಿ ತೆರೆ ಬಿದ್ದಿತು.
ಎಸ್ಎಸ್ಕೆ ಸಮಾಜದ ಸಂಪ್ರದಾಯದ ರೀತಿ ಪ್ರತಿವರ್ಷದಂತೆ ಈ ಬಾರಿಯೂ ವಿವಿಧ ಗ್ರಂಥರಾಜ ಜ್ಞಾನೇಶ್ವರಿ ಸಾಮೂಹಿಕ ಪಾರಾಯಣ ಸೇರಿ ಹಲವು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.
ದಿಂಡಿ ಮಹೋತ್ಸವದ ಹಿನ್ನಲೆ ಡಿ.27ರ ಶುಕ್ರವಾರ ಬೆಳಗ್ಗೆ 5.30 ರಿಂದ ಕಾಕಡಾರತಿ, ಭಜನೆ ಹಾಗೂ ಜ್ಞಾನೇಶ್ವರಿ ಪಾರಾಯಣ ಉದ್ಯಾಪನಾ ಕಾರ್ಯಕ್ರಮ, ಬೆಳಗ್ಗೆ 8.30 ರಿಂದ ವಿಠ್ಠಲ ರುಕ್ಮಾಯಿ ದೇವಸ್ಥಾನದಿಂದ ಆರಂಭವಾದ ವಿಠ್ಠಲ ರುಕ್ಮಾಯಿ ದಿಂಡಿ ಉತ್ಸವ ಮೆರವಣಿಗೆ ನಗರದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ ದೇವಸ್ಥಾನಕ್ಕೆ ಮರಳಿತು.
ಮೆರವಣಿಗೆಯುದ್ದಕ್ಕೂ ವಿಠ್ಠಲ ರುಕ್ಮಾಯಿ ಸ್ಮರಣೆ ಹಾಗೂ ಭಜನೆ ನಡೆಯಿತು. ನಂತರ ವಿಠ್ಠಲ ರುಕ್ಮಾಯಿ ದೇವಸ್ಥಾನದ ಆವರಣದಲ್ಲಿ ಸಂತರು ಹಾಗೂ ಭಕ್ತರಿಗೆ ಮಹಾಪ್ರಸಾದ ವ್ಯವಸ್ಥೆ ಮಾಡಲಾಗಿತ್ತು.
ಎಸ್ಎಸ್ಕೆ ಸಮಾಜದ ಹಂಗಾಮಿ ಅಧ್ಯಕ್ಷ ಮೋಹನ್.ಎನ್. ಖಿರೋಜಿ, ಉಪಾಧ್ಯಕ್ಷ ಪರಶುರಾಮಸಾ ಕಾಟ್ವೆ, ಖಜಾಂಚಿ ತುಳಜಪ್ಪ ಭೂತೆ, ಅಶೋಕ್ ಭೂತೆ, ವಿಠ್ಠಲ ಮೆಹರ್ವಾಡೆ, ಶ್ರೀಕಾಂತ್ ಮೆಹರ್ವಾಡೆ, ಪಾಂಡು ಭೂತೆ, ವಿನಾಯಕ ಲದ್ವಾ, ನವೀನ್ ಲದ್ವಾ, ಅಂಬಾಸ ಮೆಹರ್ವಾಡೆ, ವಿಶ್ವನಾಥ್ ಬದ್ದಿ, ಲಕ್ಷ್ಮೀ ಮೆಹರ್ವಾಡೆ, ಜಯಲಕ್ಷ್ಮೀ , ಅಂಬುಜಾ ಬಾಯಿ ರಾಜೋಳಿ, ಟಿ. ರೂಪಾ ಭೂತೆ, ಎಂ. ಜ್ಯೋತಿ ಖಿರೋಜಿ ಇತರರಿದ್ದರು.