50 ಯೂನಿಟ್ ರಕ್ತ ಸಂಗ್ರಹ

blood
ಶೃಂಗೇರಿ ಜೆಸಿಬಿಎಂ ಕಾಲೇಜಿನಲ್ಲಿ ರಕ್ತದಾನ ಶಿಬಿರವನ್ನು ಡಾ. ಲಕ್ಷ್ಮೀನಾರಾಯಣ್ ಉದ್ಘಾಟಿಸಿದರು. ಬಿ.ಶಿವಶಂಕರ್, ನಾಗಭೂಷಣ್, ಸಂದೇಶ್, ಶೃಂಗೇರಿ ಶಿವಣ್ಣ ಇತರರಿದ್ದರು.
Published on

ಶೃಂಗೇರಿ: ಜೆಸಿಬಿಎಂ ಕಾಲೇಜಿನಲ್ಲಿ ಕುವೆಂಪು ವಿಶ್ವವಿದ್ಯಾಲಯ ಮಟ್ಟದ ರಾಷ್ಟ್ರೀಯ ಸೇವಾ ಯೋಜನೆಯ ಅಂತರ ಕಾಲೇಜು ಶಿಬಿರದಲ್ಲಿ ರಕ್ತದಾನ ಶಿಬಿರ ನಡೆಸಲಾಯಿತು. ಶೃಂಗೇರಿ ಶಿವಣ್ಣ 54ನೇ ಬಾರಿ ರಕ್ತದಾನ ಮಾಡಿ ಶಿಬಿರ ಉದ್ಘಾಟಿಸಿದರು. ನಾನು ಅನೇಕ ವರ್ಷಗಳಿಂದ ರಕ್ತದಾನ ಮಾಡುತ್ತಿದ್ದೇನೆ. ಯಾವುದೇ ತೊಂದರೆಯಾಗಿಲ್ಲ. ಯುವಕರು ರಕ್ತದಾನ ಮಾಡಿ ಇನ್ನೊಬ್ಬರಿಗೆ ನೆರವಾಗಬೇಕು ಎಂದರು. ಶಿಬಿರಾರ್ಥಿಗಳು ಹಾಗೂ ಕಾಲೇಜಿನ ವಿದ್ಯಾರ್ಥಿಗಳು, ಸಿಬ್ಬಂದಿಯಿಂದ 50 ಯೂನಿಟ್ ರಕ್ತ ಸಂಗ್ರಹಿಸಿ ಶಾರದಾ ರಕ್ತನಿಧಿ ಕೇಂದ್ರಕ್ಕೆ ನೀಡಲಾಯಿತು. ಅಭಿನವ ವಿದ್ಯಾತೀರ್ಥ ಆಸ್ಪತ್ರೆ ಮಕ್ಕಳ ತಜ್ಞ ಡಾ. ಲಕ್ಷ್ಮೀನಾರಾಯಣ, ನಾಗಭೂಷಣ್, ನ್ಯಾಕ್ ಸಂಚಾಲಕ ಲಕ್ಷ್ಮೀನಾರಾಯಣ್, ರೆಡ್‌ಕ್ರಾಸ್ ಅಧಿಕಾರಿ ಸಂದೇಶ್, ಪ್ರಶಾಂತ್, ಸಂತೋಷ್‌ಕುಮಾರ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net