5 ಜನ ಬಾಲ ಕಾರ್ಮಿಕರು ಪತ್ತೆ

22150b9f-1a7e-4ccf-bdad-3fcf7419b2cc
Published on

ಬಾಗಲಕೋಟೆ: ತಾಲೂಕಿನ ಬಿಲ್ ಕೆರೂರ ಡಿ.ಎಚ್.ಕೆ ಇಟ್ಟಿಗೆ ಬಟ್ಟಿಯಲ್ಲಿ 3 ಬಾಲಕಾರ್ಮಿಕರು ಹಾಗೂ ಬೀಳಗಿ ತಾಲೂಕಿನ ಜನತಾ ಗ್ಯಾರೇಜನಲ್ಲಿ ಇಬ್ಬರು ಕಿಶೋರ ಕಾರ್ಮಿಕರನ್ನು ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಪೊಲೀಸ್ ಇಲಾಖೆ ಹಾಗೂ ಬಾಲಕಾರ್ಮಿಕ ಯೋಜನಾ ಸಂಸ್ಥೆ ನೇತೃತ್ವ ತಂಡ ಗುರುವಾರ ದಾಳಿ ಮಾಡಿ ಪತ್ತೆ ಹಚ್ಚಿದೆ.

ಖಚಿತ ಮಾಹಿತಿ ಮೇರೆಗೆ ಸ್ಥಳಕ್ಕೆ ಕಾರ್ಯಾಚರಣೆ ತಂಡ ಭೇಟಿ ನೀಡಿ 5 ಬಾಲ ಕಾರ್ಮಿಕರನ್ನು ರಕ್ಷಣೆ ಮಾಡಿ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಮುಂದೆ ಹಾಜರುಪಡಿಸಲಾಗಿದೆ. ತಪ್ಪಿತಸ್ಥ ಮಾಲಿಕರ ವಿರುದ್ದ ಬಾಲ ಮತ್ತಿ ಕಿಶೋರ ಕಾರ್ಮಿಕ (ನಿಷೇಧ ಮತ್ತು ನಿಯಂತ್ರಣ) ಕಾಯ್ದೆ 1986 ತಿದ್ದುಪಡಿ ಕಾಯ್ದೆ 2016 ರಂತೆ ಕಾನೂನು ಕ್ರಮ ಜರುಗಿಸಲು ಕ್ರಮವಹಿಸಲಾಗುತ್ತಿದೆ ಎಂದು ಬಾಲ ಕಾರ್ಮಿಕ ಯೋಜನಾ ಸಂಸ್ಥೆಯ ಯೋಜನಾ ನಿರ್ದೇಶಕ ಸುಧಾರಕ ಬಡಿಗೇರ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net