ಮೂರನೇ ದಿನದ ಪಂದ್ಯದಲ್ಲಿ 5 ತಂಡಗಳು ಮುನ್ನಡೆ

ಮೂರನೇ ದಿನದ ಪಂದ್ಯದಲ್ಲಿ 5 ತಂಡಗಳು ಮುನ್ನಡೆ
Published on

ಗೋಣಿಕೊಪ್ಪ: ಕುತ್‌ನಾಡು ಬೆರಳಿನಾಡು ಪ್ರೌಢಶಾಲೆಯ ವಜ್ರಮಹೋತ್ಸವದ ಪ್ರಯುಕ್ತ ನೆಡೆಯುತ್ತಿರುವ ಮೂರನೇಯ ದಿನದ ಹಾಕಿ ಪ್ರಥಮ ಪಂದ್ಯದಲ್ಲಿ ಮಾಹದೇವರ ಸ್ಪೋರ್ಟ್ಸ್ ಕ್ಲಬ್ ತಂಡವು ಶಿವಾಜಿ ನಾಪೋಕ್ಲ್ ತಂಡವನ್ನು 2-0 ಗೋಲುಗಳ ಅಂತರದಲ್ಲಿ ಸೋಲಿಸುವ ಮೂಲಕ ವಿಜಯ ಸಾಧಿಸಿತು.

ದ್ವಿತೀಯ ಪಂದ್ಯದಲ್ಲಿ ಬೂಟ್ಟಿಯತ್ ನಾಡು ಕುಂದ ತಂಡ ಎಂಆರ್‌ಎಫ್ ಮೂರ್ನಾಡು ತಂಡವನ್ನು 3-2 ಗೋಲುಗಳ ಅಂತರದಿಂದ ಸೋಲಿಸಿ ಕ್ವಾರ್ಟರ್ ಫೈನಲ್ ಪ್ರವೇಶಿಸಿತು.

ಮೂರನೆ ಪಂದ್ಯದಲ್ಲಿ ಕೊಣನಕಟ್ಟೆ ತಂಡವು ಕುತ್ತ್ ನಾಡು ಸ್ಟ್ರೈಕರ್ಸ್ ತಂಡವನ್ನು 4-2 ಗೋಲುಗಳ ಅಂತರದಿಂದ ಸೋಲಿಸಿ ಕ್ವಾಟರ್ ಫೈನಲ್ ಪ್ರವೇಶಿಸಿತು.

ದಿನದ ನಾಲ್ಕನೇ ಪಂದ್ಯದಲ್ಲಿ ಡ್ರಿಬ್ಲರ್ಸ್ ಹಂಪ್ ತಂಡ ಇವೈಸಿ ಬೇಗೂರು ತಂಡವನ್ನು 2-0 ಗೋಲುಗಳ ಅಂತರದಿಂದ ಸೋಲಿಸಿತು.

ದಿನದ ಕೊನೆಯ ಪಂದ್ಯದಲ್ಲಿ ಬ್ಲೆಜ್ ಮೂರ್ನಾಡು ತಂಡವು ಎಎಸ್‌ಸಿ ಅಮ್ಮತಿ ತಂಡವನ್ನು 2-0 ಗೋಲುಗಳಿಂದ ಸೋಲಿಸಿತು.

ಪಂದ್ಯದ ನಿರ್ದೇಶಕರಾಗಿ ಸಣ್ಣುವಂಡ ಲೋಕೇಶ್ ನಂಜಪ್ಪ ಇದ್ದರು. ತೀರ್ಪುಗಾರರಾಗಿ ಕುಪ್ಪಂಡ ದಿಲನ್, ಮೂಕಚಂಡ ನಾಚ್ಚಪ್ಪ, ಚೊಯಮಾಡಂಡ ಚಂಗಪ್ಪ, ಅಪ್ಪಚೆಟೋಳಂಡ ಅಯ್ಯಪ್ಪ, ಕಲ್ಮಾಡಂಡ ಸೋಮಣ್ಣ, ವಿನೋದ್ ಕುಮಾರ್, ಕರವಂಡ ಅಪ್ಪಣ್ಣ, ಅನ್ನಾಡಿಯಂಡ ಪೊನ್ನಣ್ಣ, ಪಟ್ರಪಂಡ ಸಚಿನ್ ಕಾರ್ಯ ನಿರ್ವಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net