

ಮದ್ದೂರು: ತಾಲೂಕಿನ ಕೊಪ್ಪದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು 2023_-24ನೇ ಸಾಲಿನ ಕಲಾ ವಿಭಾಗದ ಪದವಿ ಪರೀಕ್ಷೆಯಲ್ಲಿ 5 ಚಿನ್ನದ ಪದಕ ಹಾಗೂ 13 ನಗದು ಬಹುಮಾನ ಪಡೆದುಕೊಂಡಿದೆ ಎಂದು ಪ್ರಾಂಶುಪಾಲ ಡಾ.ಅಣ್ಣಯ್ಯ ತೈಲೂರು ತಿಳಿಸಿದರು.
ಸಾಧಕ ವಿದ್ಯಾರ್ಥಿಗಳೊಂದಿಗೆ ಶುಕ್ರವಾರ ಸಂತಸ ಹಂಚಿಕೊಂಡು ಮಾತನಾಡಿದ ಅವರು, ಕಲಾ ವಿಭಾಗದಿಂದ ಬಿ.ನಂದೀಶ್ ಅರ್ಥಶಾಸ್ತ್ರ ವಿಷಯದಲ್ಲಿ 2 ಚಿನ್ನದ ಪದಕ, ಕನ್ನಡದಲ್ಲಿ 2 ಚಿನ್ನದ ಪದಕ ಹಾಗೂ 10 ನಗದು ಬಹುಮಾನಗಳನ್ನು ಗಳಿಸಿದ್ದಾರೆ. ಸಮಾಜಶಾಸ್ತ್ರ ವಿಷಯದಲ್ಲಿ ಸೌಂದರ್ಯ 1 ಚಿನ್ನದ ಪದಕ ಹಾಗೂ ನಗದು ಬಹುಮಾನ, ಅರ್ಥಶಾಸ್ತ್ರ ವಿಷಯದಲ್ಲಿ ಮನ್ಮಿತ್ ಹಾಗೂ ನಂದನ್‌ಕುಮಾರ್ ನಗದು ಬಹುಮಾನ ಪಡೆದು ಜಿಲ್ಲೆ ಹಾಗೂ ಕಾಲೇಜಿಗೆ ಕೀರ್ತಿ ತಂದಿದ್ದಾರೆ ಎಂದರು.
2003ರಲ್ಲಿ ಆರಂಭವಾದ ಕಾಲೇಜು 2016ರವರೆಗೂ ಸತತವಾಗಿ ಮೈಸೂರು ವಿಶ್ವವಿದ್ಯಾನಿಲಯದಿಂದ ಪದವಿಗಳಲ್ಲಿ ಚಿನ್ನದ ಬೇಟೆಯಾಡುತ್ತಿದ್ದು, ಅದು ಮುಂದುವರಿಸಿರುವುದು ಸಂತಸ ತಂದಿದೆ ಎಂದರು.
ಉಪನ್ಯಾಸಕರಾದ ಜಿ.ಯಶೋದಾ, ಡಾ.ಕೆ.ವಿ.ಲತಾ, ಸಂತೋಷ್, ಶ್ರೀನಿವಾಸ್ ಇದ್ದರು.