5.20 ಲಕ್ಷ ರೂ. ಮೌಲ್ಯದ ಆಭರಣ

Crime Logo
Published on

ಕಲಬುರಗಿ: ನಗರದ ಅಬೂಬಕರ್ ಕಾಲನಿಯ ಮಹಿಮುದ್ದೀಯಾ ಮಜೀದ್ ಹತ್ತಿರದ ಮನೆಯಲ್ಲಿ ನಗದು ಸೇರಿ ೫.೨೦ ಲಕ್ಷ ರೂ. ಮೌಲ್ಯದ ಚಿನ್ನಾಭರಣವನ್ನು ಕಳ್ಳತನ ಮಾಡಲಾಗಿದೆ ಎಂದು ವಿಶ್ವವಿದ್ಯಾಲಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಸೈಯದ್ ಯೂಸೂಪ್ ಮನೆಯಲ್ಲಿ ಕಳ್ಳತನ ನಡೆದಿದೆ. ಶಹಾಪುರದ ಮಹಲ್‌ರೋಜ್‌ದಲ್ಲಿ ನಡೆಯುವ ಮೋಹರಂ ಹಬ್ಬಕ್ಕೆ ಮನೆಯವರೆಲ್ಲ ಕೂಡಿ ಜು.೧೩ರಂದು ಹೋಗಿದ್ದು, ೧೫ರಂದು ವಾಪಸ್ ಬಂದಾಗ ಕಳ್ಳತನ ಆಗಿದ್ದು ತಿಳಿದಿದೆ. ಮನೆಯಲ್ಲಿದ್ದ ೧.೭೫ ಲಕ್ಷ ರೂ. ಮೌಲ್ಯದ ಬಂಗಾರದ ನೆಕ್‌ಲೆಸ್, ೧.೦೫ ಲಕ್ಷ ರೂ. ನೆಕ್‌ಲೆಸ್, ತಲಾ ೩೫ ಸಾವಿರ ರೂ.ನ ಎರಡು ಸುತ್ತುಂಗುರ, ೩೫ ಸಾವಿರ ರೂ.ನ ಕಿವಿಯೋಲೆ, ಒಂದು ಲಕ್ಷ ರೂ. ನಗದು ಕಳ್ಳತನ ಮಾಡಿಕೊಂಡು ಹೋಗಿದ್ದಾರೆ ಎಂದು ದೂರು ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net