49ನೇ ವರ್ಷದ ದೈವಕೋಲ ನೇಮೋತ್ಸವ

49ನೇ ವರ್ಷದ ದೈವಕೋಲ ನೇಮೋತ್ಸವ
Published on

ಸೋಮವಾರಪೇಟೆ; ತಾಲೂಕಿನ ಐಗೂರು ಗ್ರಾಮದ ಶ್ರೀ ಆದಿಶಕ್ತಿ ಮಹಾತಾಯಿ ಹಾಗೂ ಪಾಷಾಣಮೂರ್ತಿ ಅಮ್ಮನವರ ದೇವಾಲಯದಲ್ಲಿ 49ನೇ ವರ್ಷದ ದೈವಕೋಲ ನೇಮೋತ್ಸವ ಇತ್ತೀಚೆಗೆ 6 ದಿನಗಳ ಕಾಲ ನಡೆಯಿತು.

ದೇವಾಲಯದಲ್ಲಿ ಶ್ರೀ ಗಣಪತಿ ಹೋಮ, ಕಳಸದ ಮೆರವಣಿಗೆ, ಮಹಾಪೂಜೆ ನಡೆದವು. ರಾತ್ರಿ ಆಧಿಶಕ್ತಿ ಮಹಾತಾಯಿ ದರ್ಶನ ನಡೆಯಿತು. ಪಾಷಾಣಮೂರ್ತಿ ಮತ್ತು ಕಲ್ಲಡ ದೈವಗಳ ಕೋಲ, ಕುಪ್ಪೆ ಪಂಜುರ್ಲಿ ದೈವದ ಕೋಲ, ಕೊರತಿ ದೈವದ ಕೋಲ, ಕೊರಗಜ್ಜ ದೈವದ ಕೋಲ, ಧರ್ಮ ದೈವದ ಕೋಲ, ನಂತರ ಬಂಡಾರ ನಿರ್ಗಮನ ಮಹಾಪೂಜೆ ನಡೆಯಿತು.

ದೇವಾಲಯದ ಪದಾಧಿಕಾರಿಗಳಾದ ಆನಂದ ಪೂಜಾರಿ, ಧರ್ಮಪ್ಪ, ಸಂದೇಶ್ ಕುಮಾರ್, ಇಂದ್ರೇಶ್, ಸೀನ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net