48 ಗಂಟೆ, 236 ಜನರಿಗೆ ವೈರಾಣು

carona logo
Published on

ಕಾರವಾರ: ಜಿಲ್ಲೆಯಲ್ಲಿ ಕಳೆದ 48 ಗಂಟೆಗಳಲ್ಲಿ 236 ಜನರಲ್ಲಿ ಕರೊನಾ ಸೋಂಕು ಇರುವುದು ಖಚಿತವಾಗಿದೆ. 82 ಜನ ಗುಣ ಹೊಂದಿ ಬಿಡುಗಡೆಯಾಗಿದ್ದು, ಮೂವರು ಸಾವನ್ನಪ್ಪಿದ್ದಾರೆ. ಒಟ್ಟಾರೆ ಸೋಂಕಿತರ ಸಂಖ್ಯೆ 6336 ಕ್ಕೆ ಏರಿಕೆಯಾಗಿದ್ದು, 1750 ಸಕ್ರಿಯ ಪ್ರಕರಣಗಳಿವೆ. 724 ಜನ ಮನೆಯಲ್ಲಿ, 1026 ಜನ ಆಸ್ಪತ್ರೆ ಹಾಗೂ ಕೋವಿಡ್ ಕೇರ್ ಸೆಂಟರ್​ಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕಾರವಾರದಲ್ಲಿ 69, ಅಂಕೋಲಾದಲ್ಲಿ 33, ಕುಮಟಾದಲ್ಲಿ 30, ಹೊನ್ನಾವರದಲ್ಲಿ 27, ಭಟ್ಕಳದಲ್ಲಿ 1, ಶಿರಸಿಯಲ್ಲಿ 4, ಸಿದ್ದಾಪುರದಲ್ಲಿ 32, ಯಲ್ಲಾಪುರದಲ್ಲಿ 24, ಹಳಿಯಾಳದಲ್ಲಿ 16 ಜನರಿಗೆ ಸೋಂಕು ತಗುಲಿದೆ. ಕಾರವಾರದಲ್ಲಿ 13, ಅಂಕೋಲಾದಲ್ಲಿ 4, ಕುಮಟಾದಲ್ಲಿ 13, ಹೊನ್ನಾವರದಲ್ಲಿ 39, ಮುಂಡಗೋಡಿನಲ್ಲಿ 4, ಹಳಿಯಾಳದಲ್ಲಿ 7, ಜೊಯಿಡಾದಲ್ಲಿ 2 ಜನ ಗುಣ ಹೊಂದಿ ಬಿಡುಗಡೆಯಾಗಿದ್ದಾರೆ. ಒಟ್ಟಾರೆ ಗುಣ ಹೊಂದಿದವರ ಸಂಖ್ಯೆ 4520 ಕ್ಕೆ ಏರಿದೆ. ಅಂಕೋಲಾ, ಹೊನ್ನಾವರ, ಹಳಿಯಾಳದಲ್ಲಿ ತಲಾ ಒಬ್ಬರು ಕರೊನಾದಿಂದ ಮೃತಪಟ್ಟಿದ್ದು, ಒಟ್ಟಾರೆ ಕರೊನಾದಿಂದ ಮೃತರಾದವರ ಸಂಖ್ಯೆ 67 ಕ್ಕೆ ಏರಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net