ಚಿಂತಾಮಣಿ: ವ್ಯಾಪಾರಿಯಿಂದ 48.55 ಲಕ್ಷ ರೂ. ಮೌಲ್ಯದ ಟೊಮ್ಯಾಟೊ ಖರೀದಿಸಿ ಹಣ ನೀಡದೆ ವಂಚಿಸಿರುವ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.
ನಗರದ ಎಪಿಎಂಸಿ ಮಾರುಕಟ್ಟೆ ಟೊಮ್ಯಾಟೊ ವ್ಯಾಪಾರಿ ನಗರದ ಕೆಜಿಎನ್ ಬಡಾವಣೆ ನಿವಾಸಿ ಮಹಮದ್ ಶಬ್ಬಿರ್ವುದ್ದೀನ್ ವಂಚನೆಗೊಳಗಾದವರು. ಇವರ ದೂರಿನ ಆಧಾರದಲ್ಲಿ ಆರ್.ಎಂ. ಮೆಹೇತ್ರೆ ಬಾವುಸಾ, ನಿತಿನ್ ಮೆಹೇತ್ರೆ ಬಾವುಸಾ ಮತ್ತು ಭಗವತ್ ದತ್ತು ಸರ್ಮಲೆ ಎಂಬುವರ ವಿರುದ್ಧ ರೂ.25ರಂದು ಪ್ರಕರಣ ದಾಖಲಾಗಿದೆ.
ಮಹಾರಾಷ್ಟ್ರದ ಸಂಗಮ್ ನೇರ್ ನಿವಾಸಿ ಭಗವತ್ ದತ್ತು ಸರ್ಮಲೆ 12 ವರ್ಷಗಳಿಂದ ನಮ್ಮ ಜತೆ ಕೆಲಸ ಮಾಡುತ್ತಿದ್ದು, 2024ರ ಜುಲೈ 3ರಂದು ಸಂಗಮ್ ನೇರ್ ನಿವಾಸಿ ಆರ್.ಎಂ. ಮೆಹೇತ್ರ ಬಾವುಸಾ ಅವರನ್ನು ಸ್ನೇಹಿತ ಎಂದು ಫೋನ್ ಮೂಲಕ ಪರಿಚಯಿಸಿ, ಅವರು ದೊಡ್ಡ ಟೊಮ್ಯಾಟೊ ವ್ಯಾಪಾರಿ ಎಂದು ನಂಬಿಸಿದ್ದ. ನಂತರ ಮೆಹೇತ್ರ ಬಾವುಸಾ ಸೋಂದರ ನಿತಿನ್ ಮೆಹೇತ್ರ ಅವರ ಪರಿಚಯವಾಗಿತ್ತು.
ನಂತರ ಆರ್.ಎಂ. ಮೆಹೇತ್ರ ಬಾವುಸಾ ಹೆಸರಿನಲ್ಲಿ ನಿತಿನ್ಮೆಹೇತ್ರ 2024ರ ಸೆ.19ರವರೆಗೆ ಒಟ್ಟು 48,55,000 ಲಕ್ಷ ರೂ. ಮೌಲ್ಯದ ಟೊಮ್ಯಾಟೊ ಖರೀದಿ ಮಾಡಿದ್ದು, ಹಣ ನೀಡಿಲ್ಲ ಎಂದು ಶಬ್ಬಿರ್ವುದ್ದೀನ್ ದೂರಿನಲ್ಲಿ ತಿಳಿಸಿದ್ದಾರೆ.