440 ಕೆವಿ ಕಾಮಗಾರಿ ತಕ್ಷಣ ಸ್ಥಗಿತ

Gur_electrical
Published on

ಗುರುಪುರ: ಪಡುಬಿದ್ರಿಯಿಂದ ಕಾಸರಗೋಡಿಗೆ ವಿದ್ಯುತ್ ಸರಬರಾಜು ವಾಡುವ ಉದ್ದೇಶಿತ 440 ಕೆವಿ ವಿದ್ಯುತ್ ವಾರ್ಗದ ಕಾಮಗಾರಿಯನ್ನು ತಕ್ಷಣದಿಂದ ಸ್ಥಗಿತಗೊಳಿಸಬೇಕು. ಜಾಗದ ವಾಲೀಕರ ಮತ್ತು ರೈತರ ಅನುಮತಿ ಪಡೆಯದೆ ಗುತ್ತಿಗೆದಾರ ಕಂಪನಿ ಕಾಮಗಾರಿ ನಡೆಸುತ್ತಿರುವುದು ಖಂಡನೀಯ ಎಂದು ಬೆಂಗಳೂರಿನ ಕರ್ನಾಟಕ ರಾಜ್ಯ ಅಲೆವಾರಿ ಮತ್ತು ಅರೆ ಅಲೆವಾರಿ ಜನಾಂಗ ಒಕ್ಕೂಟದ ಗೌರವಾಧ್ಯಕ್ಷ ಕೆ.ರವೀಂದ್ರ ಶೆಟ್ಟಿ ಉಳಿದೊಟ್ಟು ತಿಳಿಸಿದ್ದಾರೆ.

ವಿದ್ಯುತ್ ವಾರ್ಗದ ಕಾಮಗಾರಿ ನಡೆಯುತ್ತಿರುವ ಕುಪ್ಪೆಪದವು ಸಮೀಪದ ಅಗರಿ ಚಂದಯ್ಯ ಜೋಗಿ ಎಂಬುವರ ಸ್ಥಳಕ್ಕೆ ಶುಕ್ರವಾರ ಭೇಟಿ ನೀಡಿ ಕಾಮಗಾರಿ ವೀಕ್ಷಿಸಿದ ಬಳಿಕ ಅವರು ಮಾತನಾಡಿದರು.

ಕರ್ನಾಟಕ ರಾಜ್ಯ ರೈತ ಸಂದ ಸಂಟನಾ ಕಾರ್ಯದರ್ಶಿ ಮನೋಹರ್ ಶೆಟ್ಟಿ ನಡಿಕಂಬ್ಲ ಸಂತ್ರಸ್ತರ ಪರವಾಗಿ ರವೀಂದ್ರ ಶೆಟ್ಟಿಯವರಿಗೆ ಮನವಿ ನೀಡಿ, ಯೋಜನೆಯಿಂದ ಆಗುವ ಸಮಸ್ಯೆಗಳ ಬಗ್ಗೆ ವಿವರಿಸಿದರು. ವಿದ್ಯುತ್ ವಾರ್ಗ ಯೋಜನೆಗೆ ನಮ್ಮ ವಿರೋಧವಿಲ್ಲ. ಆದರೆ ರೈತರ ಜಾಗದ ಹೊರತಾಗಿ ಪರ್ಯಾಯ ವಾರ್ಗದಲ್ಲಿ ಯೋಜನೆ ಅನುಷ್ಠಾನವಾಗಬೇಕು ಎಂದರು.

ಕರ್ನಾಟಕ ರಾಜ್ಯ ಅಲೆವಾರಿ ಮತ್ತು ಅರೆ ಅಲೆವಾರಿ ಜನಾಂಗದ ಒಕ್ಕೂಟದ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷ ಡಾ.ಕೇಶವನಾಥ ಜೋಗಿ, ಕರ್ನಾಟಕ ರಾಜ್ಯ ರೈತ ಸಂ ಹಸಿರು ಸೇನೆಯ ದಕ್ಷಿಣ ಕನ್ನಡ ಜಿಲ್ಲಾ ಸಂಟನಾ ಕಾರ್ಯದರ್ಶಿ ದಯಾನಂದ ಶೆಟ್ಟಿ ಕುಳವೂರು, ಸಂತ್ರಸ್ತರಾದ ಚಂದಯ್ಯ ಜೋಗಿ ಮತ್ತು ದಯಾನಂದ ಪೂಜಾರಿ ಕಂಗುರಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net