ವಿದ್ಯಾರ್ಥಿಗಳಿಂದ ನಾಯಕತ್ವ ಗುಣಕ್ಕೆ ಆದ್ಯತೆ

Mul_Leadership
Published on

ಮೂಲ್ಕಿ: ವಿದ್ಯಾರ್ಥಿಗಳು ಕಾಲೇಜು ಜೀವನದಲ್ಲಿ ನಾಯಕತ್ವ ಗುಣ ಬೆಳೆಸಿಕೊಂಡು ಸಾಧಕರಾಗಿ, ಉತ್ತಮ ಪ್ರಜೆಯಾಗಿ ಬಾಳಬೇಕು ಎಂದು ಉದ್ಯಮಿ ಸಂತೋಷ್ ಕುಮಾರ್ ಹೇಳಿದರು.

ಮೂಲ್ಕಿ ವಿಜಯಾ ಕಾಲೇಜು ಹಾಗೂ ಫೋರಂ ಆಫ್​ ಫ್ರೀ ಎಂಟರ್‌ಪ್ರೈಸಸ್ ಮುಂಬೈ ಆಶ್ರಯದಲ್ಲಿ ಆಯೋಜಿಸಲಾದ ಎರಡು ದಿನಗಳ ಉದ್ಯಮಶೀಲತಾ ನಾಯಕತ್ವ ಶಿಬಿರ ಉದ್ಘಾಟಿಸಿ ವಾತನಾಡಿದರು.

ಕಾಲೇಜು ಪ್ರಾಂಶುಪಾಲ ಪ್ರೊ.ವೆಂಕಟೇಶ್ ಭಟ್ ಅಧ್ಯಕ್ಷತೆ ವಹಿಸಿದ್ದರು. ಸಂಪನ್ಮೂಲ ವ್ಯಕ್ತಿಗಳಾದ ವಿವೇಕ್ ಪಾಟ್ನಿ ಹಾಗೂ ರಾಜೀವ್ ಕುಮಾರ್ ಲಾವ್ ಉಪಸ್ಥಿತರಿದ್ದರು. ಕಾಲೇಜು ವಾಣಿಜ್ಯ ವಿಭಾಗದ ಮುಖ್ಯಸ್ಥೆ ಶರ್ಮಿಳಾ ರಾಜೇಶ್, ವಾಣಿಜ್ಯ ಸಂಘದ ಶಿಕ್ಷಕ ಸಲಹೆಗಾರರಾದ ಸ್ವಾತಿ ಬಿ.ಶೆಟ್ಟಿ ಇದ್ದರು. ವಿದ್ಯಾರ್ಥಿಗಳಾದ ಮೊಹಮ್ಮದ್ ಮರುವನ್ ಹಾಗೂ ಶ್ರೀನಿವಾಸ್ ಸಂಪನ್ಮೂಲ ವ್ಯಕ್ತಿಗಳನ್ನು ಪರಿಚಯಿಸಿದರು. ಪ್ರಾಪ್ತಿ ಸ್ವಾಗತಿಸಿದರು. ಶ್ರೀಶಾ ವಂದಿಸಿದರು. ದಿಯಾ ಕಾರ್ಯಕ್ರಮ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net