

ಸಿಂಧನೂರು: ಸಾಲಗುಂದ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘ ನಿಯಮಿತವು ಪ್ರಸಕ್ತ ಸಾಲಿನಲ್ಲಿ 44.25 ಲಕ್ಷ ರೂ. ನಿವ್ವಳ ಲಾಭ ಗಳಿಸಿ ಎಂದು ಅಧ್ಯಕ್ಷ ಶಾಕೀರ್ ಹುಸೇನ ಉಗ್ರಾಣ ಹೇಳಿದರು.
ತಾಲೂಕಿನ ಸಾಲಗುಂದ ಸಹಕಾರಿಯಲ್ಲಿ ಗುರುವಾರ ಆಯೋಜಿಸಿದ್ದ 47ನೇ ವಾರ್ಷಿಕ ಮಹಾಸಭೆಯಲ್ಲಿ ಮಾತನಾಡಿದರು. 1976-77 ರಲ್ಲಿ ಆರಂಭವಾದ ಸಹಕಾರಿ ಮಾ.31-2024 ಅಂತ್ಯಕ್ಕೆ 119.73 ಲಕ್ಷ ಷೇರು ಬಂಡವಾಳ, 411.37 ಲಕ್ಷ ಸ್ವಂತ ಬಂಡವಾಳ ಮತ್ತು 2094.05 ಲಕ್ಷ ದುಡಿಯುವ ಬಂಡವಾಳ ಹೊಂದಿ ಪ್ರಗತಿಯತ್ತ ಸಾಗಿದೆ. ಸಹಕಾರಿ ನಿರ್ದೇಶಕರ, ಸಿಬ್ಬಂದಿ ವರ್ಗದ ಸಹಕಾರದಿಂದ ಇದು ಸಾಧ್ಯವಾಗಿದೆ. ರೈತರ ಅನುಕೂಲಕ್ಕಾಗಿ 81 ಲಕ್ಷ ರೂ. ದಾಸ್ತಾನು ಅಡಮಾನ ಸಾಲ ನೀಡಲಾಗಿದೆ.
ಇದನ್ನು ಓದಿ: ಬೀಕನಹಳ್ಳಿ ಸಹಕಾರ ಸಂಘಕ್ಕೆ ೧೨.೯೩ ಲಕ್ಷ ನಿವ್ವಳ ಲಾಭ
ಗ್ರಾಮೀಣ ಮಹಿಳೆಯರ ಸಬಲೀಕರಣಕ್ಕಾಗಿ ಸ್ವ-ಸಹಾಯ ಗುಂಪುಗಳಿಗೆ 5.19 ಲಕ್ಷ ರೂ. ಸಾಲ ನೀಡಲಾಗಿದೆ ಎಂದರು. ಸಹಕಾರಿ ಸಿಇಒ ಕೆ.ವಿರೂಪಾಕ್ಷಪ್ಪ ಮಾತನಾಡಿ, ಸಹಕಾರ ಸದಾ ರೈತರ ಹಿತ ಬಯಸಿದೆ. ಸಹಕಾರಿ ಸದಸ್ಯ ರೈತರು ಮರಣ ಹೊಂದಿದಲ್ಲಿ ರೈತರ ಕಲ್ಯಾಣ ನಿಧಿ ಯೋಜನೆಯಲ್ಲಿ 25 ಸಾವಿರ ರೂ. ನೀಡಲಾಗುತ್ತಿದೆ. ಈ ಸಾಲಿನಲ್ಲಿ 24 ರೈತ ಸದಸ್ಯರಿಗೆ 5.73 ಲಕ್ಷ ರೂ ನೀಡಿದೆ. ಇದುವರೆಗೆ 90 ರೈತ ಸದಸ್ಯರಿಗೆ 21.96 ಲಕ್ಷ ರೂ. ಸಹಾಯಧನ ನೀಡಲಾಗಿದೆ ಎಂದರು.
ಸಹಕಾರಿ ಉಪಾಧ್ಯಕ್ಷ ಅಮರೇಶ ಅಬಕಾರಿ, ನಿರ್ದೇಶಕರಾದ ಈರಣ್ಣ ಕೊಂಚಗೇರಿ, ಶ್ರೀ ಖಾಜಾಹುಸೇನ ಇಜನಿ, ಖಾದರಬೀ ಕನಕಗಿರಿ, ಗೇಸುದರಾಜ ಸರಗೂರು, ಗೋವಿಂದಪ್ಪ ಅಂಬಿಗೇರ, ಜಯಮ್ಮ ಹೂಗಾರ, ತಿಪ್ಪೇಶ ನಾಯಕ, ಬಸವರಾಜ ಕೊನ್ನಾಪುರ, ಲಕ್ಷ್ಮೀ ಲಿಂಗಪ್ಪ ದಳಪತಿ, ಲಿಂಗಪ್ಪ ತಹಸೀಲ್ದಾರ್ ಇತರರಿದ್ದರು.