

ಚಿಕ್ಕಮಗಳೂರು: ಬೀಕನಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವು ಪ್ರಸಕ್ತ ಸಾಲಿನಲ್ಲಿ ೧೨.೯೩ ಲಕ್ಷ ರೂ. ನಿವ್ವಳ ಲಾಭಗಳಿಸಿ ಪ್ರತಿ ವರ್ಷದಂತೆ ಆರ್ಥಿಕವಾಗಿ ಬೆಳವಣಿಗೆ ಹೊಂದುತ್ತಿದೆ ಎಂದು ಸಂಘದ ಅಧ್ಯಕ್ಷ ಬಿ.ಜಿ.ಸೋಮಶೇಖರಪ್ಪ ತಿಳಿಸಿದರು.
ನಗರದ ಹೊರವಲಯದ ಬೀಕನಹಳ್ಳಿ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ೨೦೨೩-೨೪ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯನ್ನು ಬುಧವಾರ ಉದ್ಘಾಟಿಸಿ ಮಾತನಾಡಿದ ಅವರು, ಸಂಘವು ಪ್ರಾರಂಭಗೊAಡು ಸತತ ಹನ್ನೊಂದು ವರ್ಷಗಳು ಪೂರೈಸಿ ನಿರಂತರವಾಗಿ ಲಾಭ ಗಳಿಸುತ್ತಿದೆ. ಆಡಿಟ್ ವರ್ಗಿಕರಣದಲ್ಲಿ ಎ ವರ್ಗದಿಂದ ಮುನ್ನೆಡೆಯುತ್ತಿದೆ. ಸಂಘವು ಸಹಕಾರಿ ತತ್ವ ಮತ್ತು ಆಶಯದಂತೆ ಎಲ್ಲ ಸಹಕಾರಿಗಳಿಗೆ ಉತ್ತಮ ಸೇವೆ ನೀಡುತ್ತಿದೆ ಎಂದರು.
ಕೇAದ್ರ ಸರ್ಕಾರ ಫ್ಯಾಕ್ಸ್ ಕಂಪ್ಯೂಟಿರೀಕರಣ ಯೋಜನೆಯಡಿ ನಮ್ಮ ಸಂಘವನ್ನು ಸಹ ಗಣಕೀಕರಣ ಮಾಡಲಿದ್ದು, ಮುಂದಿನ ದಿನಗಳಲ್ಲಿ ಅಂತರ್ಜಾಲ ವಹಿವಾಟುಗಳು ಜಾರಿಯಾಗಲಿದೆ. ಇದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಸೇವೆಯನ್ನು ಸದಸ್ಯರಿಗೆ ಒದಗಿಸಲು ಅನುಕೂಲವಾಗಲಿದೆ ಎಂದು ಹೇಳಿದರು.
ಈಗಾಗಲೇ ಸಂಘದಲ್ಲಿ ೧,೨೬೦ ಸದಸ್ಯರ ಸಂಖ್ಯಾಬಲವಿದೆ. ೨೦೨೩-೨೪ನೇ ಸಾಲಿನಲ್ಲಿ ೧೯.೭೮ ಕೋಟಿ ದುಡಿಯುವ ಬಂಡವಾಳ, ೧.೩೩ ಕೋಟಿ ಷೇರು ಬಂಡವಾಳ, ೧೩.೨೫ ಕೋಟಿ ಠೇವಣಿ, ೧೭.೭೯ ಕೋಟಿ ಸಾಲ ವಿತರಣೆ, ೨.೩೧ ಕೋಟಿ ಹೂಡಿಕೆ ಸೇರಿದಂತೆ ವರ್ಷಕ್ಕೆ ಕನಿಷ್ಟ ೧೦೦ ಕೋಟಿ ರೂ. ವಹಿವಾಟು ನಡೆ ಸುತ್ತಿದೆ ಎಂದು ವಿವರಿಸಿದರು.
ಸಂಘದ ಕಟ್ಟಡದ ಮೊದಲ ಮಹಡಿಯಲ್ಲಿ ಪ್ರವಾಸೋದ್ಯಮ ಉz್ದೆÃಶಕ್ಕಾಗಿ ಕೊಠಡಿಗಳನ್ನು ನಿರ್ಮಾಣದ ಕಾಮಗಾರಿ ನಡೆಯುತ್ತಿದೆ. ಶೀಘ್ರದಲ್ಲೇ ಪೂರ್ಣಗೊಳಿಸಿ ಬಾಡಿಗೆ ನೀಡುವ ಮೂಲಕ ಸಂಘದ ವ್ಯವಹಾರವನ್ನು ವಿಸ್ತರಿಸುವ ಉz್ದÉÃಶವನ್ನು ಹೊಂದಿದ್ದು ಸರ್ವ ಸದಸ್ಯರುಗಳ ಸಹಕಾರ ಅತ್ಯಂತ ಮುಖ್ಯವಾಗಿದೆ ಎಂದು ತಿಳಿಸಿದರು.
ಸಂಘದ ಉಪಾಧ್ಯಕ್ಷ ಎಚ್.ಎಸ್.ಪುಟ್ಟೇಗೌಡ ಮಾತನಾಡಿ, ಸಂಘದ ಅಭಿವೃದ್ಧಿಯೇ ಆಡಳಿತ ಮಂಡಳಿಯ ಧ್ಯೇಯವಾಗಿದೆ. ಸರ್ವ ಸದಸ್ಯರ ಸಹಕಾರವು ಮುಂಬರುವ ದಿನಗಳಲ್ಲಿ ಮುಂದುವರೆಯಬೇಕು. ಸಂಘದ ಹಾಗೂ ರೈತಾಪಿ ವರ್ಗದ ಅಭಿವೃದ್ದಿಗೆ ಸಹಕರಿಸಬೇಕು ಎಂದು ಆಶಿಸಿದರು.
ಈ ಸಂದರ್ಭದಲ್ಲಿ ಡಿಸಿಸಿ ಬ್ಯಾಂಕ್ ಮೇಲ್ವಿಚಾರಕ ಪವನ್‌ಕುಮಾರ್, ಸಂಘದ ನಿರ್ದೇಶಕರಾದ ಕೆ.ಸಿ.ವಿರೂಪಾಕ್ಷ, ಟಿ.ಎಸ್.ಮಧುಕುಮಾರ್, ರೇಣುಕ ಪ್ರಸಾದ್, ಎಚ್.ಪಿ.ಪುಟ್ಟೇಗೌಡ, ಬಿ.ಪಿ.ರಾಜೇಶ್, ಬಿ.ಜಿ.ಪುಟ್ಟಬಸಪ್ಪ, ಗಂಗಮ್ಮ, ಶಾಂತಮ್ಮ, ಸುಶೀಲಮ್ಮ, ಮುಖಂಡರಾದ ವಿಜಯ್‌ಕುಮಾರ್, ದಿನೇಶ್, ಪ್ರಸನ್ನ, ಯೋಗಾನಂದ, ಮಂಜೇಗೌಡ, ಬ್ಯಾಂಕ್ ಸಿಇಒ ಬಿ.ಎಸ್.ರಾಜೇಶ್ ಮತ್ತಿತರರಿದ್ದರು.