ನಕಲಿ ಅಂಕಪಟ್ಟಿ ನೀಡಿ ಅಂಚೆ ಸೇವೆಗೆ ನೇಮಕ : ಕೇಸ್ ದಾಖಲಿಸಲು ಶಿಕ್ಷಣ ಆಯುಕ್ತರ ಪತ್ರ ; ತನಿಖೆಯಲ್ಲಿ 42 ಫೇಕ್ ಮಾರ್ಕ್ಸ್ ಕಾರ್ಡ್ ಪತ್ತೆ

Fake-document-fir
Published on

ತನಿಖೆ ನಡೆಸಿ ಕಠಿಣ ಕ್ರಮ ಸಚಿವ ಪ್ರಿಯಾಂಕ್ ಖರ್ಗೆ ಹೇಳಿಕೆ

ವಿಜಯವಾಣಿ ಸುದ್ದಿಜಾಲ ಕಲಬುರಗಿ
ಎಸ್‌ಎಸ್‌ಎಲ್‌ಸಿ ಪಾಸಾಗಿರುವ ನಕಲಿ ಅಂಕ ಪಟ್ಟಿಗಳನ್ನು ನೀಡಿ ಅಂಚೆ ಇಲಾಖೆಯಲ್ಲಿ ಗ್ರಾಮೀಣ ಅಂಚೆ ಸಹಾಯಕರಾಗಿ ಕೆಲಸಕ್ಕೆ ಸೇವೆಗೆ ಸೇರಿದ ಪ್ರಕರಣಬೆಳಕಿಗೆ ಬಂದಿದೆ. ಅದರ, ಬೆನ್ನಲ್ಲಿಯೇ ನಕಲಿ ಅಂಕಪಟ್ಟಿ ನೀಡಿದವರನ್ನು ಸೇವೆಯಿಂದ ವಜಾಗೊಳಿಸುವ ಪ್ರಕ್ರಿಯೆ ಶುರುವಾಗಿದೆ.

ತನಿಖೆ ನಡೆಸಿದ ಅಧಿಕಾರಿಗಳಿಗೆ 42 ನಕಲಿ ಮಾರ್ಕ್ಸ್ ಕಾರ್ಡ್ ಗಳು ಪತ್ತೆಯಾಗಿವೆ. ಹೀಗಾಗಿ ಅವರ ವಿರುದ್ಧ ಕೇಸ್ ದಾಖಲಿಸಲು ಶಿಕ್ಷಣ ಇಲಾಖೆಯ ಆಯುಕ್ತರು ಅಂಚೆ ಅಧಿಕಾರಿಗಳಿಗೆ ಪತ್ರ ಬರೆದಿದ್ದಾರೆ ಎಂದು ಗೊತ್ತಾಗಿದೆ.


ಬೀದರ್ ಜಿಲ್ಲೆಯೇ ನಕಲಿ ಮಾರ್ಕ್ಸ್ ಕಾರ್ಡ್ ಜಾಲದ ಮೂಲ ಎನ್ನಲಾಗಿದೆ. ಕಲಬುರಗಿ ಸೇರಿದಂತೆ ಬಾಗಲಕೋಟ, ತುಮಕೂರು, ಹಾಸನ ಇನ್ನಿತರ ಜಿಲ್ಲೆಗಳಲ್ಲಿ ಗ್ರಾಮೀಣ ಅಂಚೆ ಸೇವಕರಾಗಿ ನಕಲಿ ಅಂಕ ಪಟ್ಟಿ ನೀಡಿ ಈ ಭಾಗದವರೇ ಆಯ್ಕೆಗೊಂಡಿದ್ದಾರೆ ಎಂದು ಹೇಳಲಾಗಿದೆ. ಈಗ ಪರಿಶೀಲನೆ ನಡೆಸಿ, ನಕಲಿ ಎಂದು ಕಂಡು ಬಂದವರನ್ನು ಕೆಲಸದಿಂದ ವಜಾಗೊಳಿಸಲಾಗುತ್ತಿದೆ ಎಂದು ಗೊತ್ತಾಗಿದೆ.


ಈ ನಕಲಿ ಅಂಕಪಟ್ಟಿ ಜಾಲ ಕುರಿತು ಪ್ರತಿಕ್ರಿಯಿಸಿರುವ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ, ಈ ಕುರಿತು ಹೆಚ್ಚಿನ ಮಾಹಿತಿ ಇಲ್ಲ. ಮಾಧ್ಯಮಗಳಲ್ಲಿ ಬಂದಿರುವುದಷ್ಟೆ ಗೊತ್ತಿದೆ. ಕೂಡಲೇ ಸಂಬAಧಿಸಿದ ಅಧಿಕಾರಿಗಳ ಸಭೆಯನ್ನು ನಡೆಸಿ, ಮಾಹಿತಿ ಪಡೆದುಕೊಳ್ಳುವೆ. ಅಲ್ಲದೆ ಇಂತಹ ಅಕ್ರಮ ಸಹಿಸಿಕೊಳ್ಳಲು ಆಗಲ್ಲ, ತನಿಖೆ ನಡೆಸಿ ಕ್ರಮ ಕೈಗೊಳ್ಳಲಾಗುವುದು. ಅಗತ್ಯವಾದಲ್ಲಿ ಉತನ್ನ ತನಿಖೆ ನಡೆಸಲಾಗುವುದು ಎಂದು ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net