

ಬೆಳಗಾವಿ: ವಿಜಯಪುರದಲ್ಲಿ ಜರುಗಿದ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ 8ನೇ ಅಂತರವಲಯ ಅಥ್ಲೆಟಿಕ್ ಕ್ರೀಡಾಕೂಟದಲ್ಲಿ ಲಿಂಗರಾಜ ಮಹಾವಿದ್ಯಾಲಯವು 41 ಪದಕ ಪಡೆದು 204 ಅಂಕಗಳೊಂದಿಗೆ ಸತತ 8ನೇ ಬಾರಿಗೆ ಸಮಗ್ರ ವೀರಾಗ್ರಣಿ ಪ್ರಶಸ್ತಿ ಪಡೆದುಕೊಂಡಿದೆ.
ಮಹಿಳೆಯರ ವಿಭಾಗದಲ್ಲಿ 07 ಚಿನ್ನ, 10 ಬೆಳ್ಳಿ, 08 ಕಂಚಿನ ಪದಕ ಪಡೆದು 134 ಅಂಕಗಳೊಂದಿಗೆ ಮಹಿಳೆಯರ ವಿಭಾಗದ ಸಮಗ್ರ ವೀರಾಗ್ರಣಿ ಹಾಗೂ ಪುರುಷರ ವಿಭಾಗದಲ್ಲಿ 04 ಚಿನ್ನ, 06 ಬೆಳ್ಳಿ, 06 ಕಂಚಿನ ಪದಕ ಪಡೆದು 70 ಅಂಕಗಳೊಂದಿಗೆ ಪುರುಷರ ವಿಭಾಗದ ರನ್ನರ್ ಅಪ್ ಪ್ರಶಸ್ತಿ ಪಡೆದುಕೊಂಡಿತು.
ಮಹಿಳೆಯರ ವಿಭಾಗದಲ್ಲಿ ಸ್ವರಾಂಜಲಿ ಜಾಧವ 4್ಡ100 ರಿಲೆ ಚಿನ್ನ, ಎತ್ತರ ಜಿಗಿತ, ಗುಂಜನ್ ನಿಲಜಕರ್ 4್ಡ100 ರಿಲೆ ಚಿನ್ನ, 100 ಮೀ ಹರ್ಡಲ್ಸ್, ಹೆಪ್ಲೆಥಟಲಾನ್ ಬೆಳ್ಳಿ, ರಮಲ್ ಗಡಕರಿ 200 ಮೀ ಬೆಳ್ಳಿ, 100 ಮೀ ಕಂಚು, 4್ಡ100 ರಿಲೆ ಚಿನ್ನ, ಪ್ರಿಯಾ ಜಾಧವ್ 100 ಮೀ ಕಂಚು, 4್ಡ100 ರಿಲೆ ಚಿನ್ನ, ಸಷ್ಟಿ ಪಾಟೀಲ 20 ಕಿ.ಮೀ ವಾಕ್ ಚಿನ್ನ, ಗೀತಾಂಜಲಿ 400 ಮೀ ಕಂಚು, 4್ಡ400 ರಿಲೆ ಬೆಳ್ಳಿ, ಕಾವೇರಿ ಗಸ್ತಿ 800 ಮೀ ಕಂಚು, 4್ಡ400 ರಿಲೆ ಬೆಳ್ಳಿ, ರಮ್ಯಾ ಜಿರಲಿ 1500 ಮೀ ಬೆಳ್ಳಿ, 4್ಡ400 ರಿಲೆ ಬೆಳ್ಳಿ, ಭಾಗ್ಯಶ್ರೀ 10 ಕಿ.ಮಿ ಓಟ ಬೆಳ್ಳಿ, 4್ಡ400 ಬೆಳ್ಳಿ, ಕತಿಕಾ ಎತ್ತರ ಜಿಗಿತ ಬೆಳ್ಳಿ, ಟ್ರಿಪಲ್ ಜಂಪ್ ಕಂಚು, ಪ್ರವೀಣಾ ಬೆಡಸೂರ ಚಕ್ರ ಎಸೆತ ಚಿನ್ನ, ನಾಗೇಶ್ವರಿ ಚಕ್ರ ಎಸೆತ, ಹ್ಯಾಮರ್ ಥ್ರೋದಲ್ಲಿ ಕಂಚಿನ ಪದಕವನ್ನು ಪಡೆದಿದ್ದಾರೆ,
ಪುರುಷರ ವಿಭಾಗದಲ್ಲಿ ವಿಜಯ ಸಾವತಕರ್ 10 ಕಿ.ಮೀ ಓಟದಲ್ಲಿ ಚಿನ್ನ, 5 ಕಿ.ಮೀ ಓಟದಲ್ಲಿ ಬೆಳ್ಳಿ, 4್ಡ400 ರಿಲೆ ಬೆಳ್ಳಿ, 4್ಡ400 ಮಿಕ್ಸ್ ರಿಲೆ ಬೆಳ್ಳಿ, ಶಶಿಕಾಂತ ಜಗನೂರ 400 ಮೀ ಹರ್ಡಲ್ಸ್ ಕಂಚು, 4್ಡ400 ರಿಲೆ ಬೆಳ್ಳಿ, 4್ಡ400 ಮಿಕ್ಸ್ ರಿಲೆ ಬೆಳ್ಳಿ, ವೆಂಕಟೇಶ್ ಖೋತ 4್ಡ400 ರಿಲೆ ಬೆಳ್ಳಿ, ಬಾಳೇಶ ಶಿರಣ್ಣವರ 4್ಡ400 ರಿಲೆ ಬೆಳ್ಳಿ, ಸುನೀಲ ಹೆಂಡೂರಿ 100 ಮೀ, 200 ಮೀ ಕಂಚು, 4್ಡ100 ರಿಲೆ ಚಿನ್ನ ನಿಂಗಾನಂದ ಹಿರೇಮಠ ಡೆಕಥ್ಲಾನ್ ಚಿನ್ನ, 110 ಮೀ ಅಡೆತಡೆ ಓಟದಲ್ಲಿ ಕಂಚು, 4್ಡ100 ರಿಲೆಯಲ್ಲಿ ಚಿನ್ನ ವಿಶಾಲ್ ಸುಳ್ಳನ್ನವರ ಟ್ರಿಪಲ್ ಜಂಪ್ ಬೆಳ್ಳಿ, 4್ಡ100 ರಿಲೆ ಚಿನ್ನ, ಪ್ರಸನ್ನ 4್ಡ100 ರಿಲೆ ಚಿನ್ನ, ಶುಭಂ ಆನಂದ 110 ಮೀ ಹರ್ಡಲ್ಸ್ ಬೆಳ್ಳಿ, ಮೊಹಮ್ಮದ್ ಕೈಫ್ ಖಾಜಿ ಗುಂಡು ಎಸೆತದಲ್ಲಿ ಕಂಚಿನ ಪದಕ ಪಡೆದಿದ್ದಾರೆ.
ಅಥ್ಲೆಟಿಕ್ ಪಂದ್ಯಾವಳಿಯಲ್ಲಿ ಸಾಧನೆಗೈದ ಎಲ್ಲ ವಿದ್ಯಾರ್ಥಿಗಳನ್ನು ಕೆ.ಎಲ್.ಇ ಸಂಸ್ಥೆಯ ಆಡಳಿತ ಮಂಡಳಿ ಸದಸ್ಯರಾದ ಮಹಾಂತೇಶ ಎಂ.ಕವಟಗಿಮಠ, ಶಂಕರಣ್ಣ ಮುನವಳ್ಳಿ, ವೈ.ಎಸ್.ಪಾಟೀಲ, ಬಿ.ಆರ್.ಪಾಟೀಲ ಹಾಗೂ ಪ್ರಾಚಾರ್ಯ ಡಾ.ಹನುಮಂತ ಮೇಲಿನಮನಿ, ದೈಹಿಕ ಶಿಕ್ಷಣ ನಿರ್ದೇಶಕ ಡಾ.ಸಿ.ರಾಮಾರಾವ ಅಭಿನಂದಿಸಿದರು.