40 ಕೆಜಿ ಬೆಳ್ಳಿ ಗಣೇಶ ವಿಗ್ರಹ ಪ್ರತಿಷ್ಠಾಪನೆ

28HUK4A
Published on

ಹುಕ್ಕೇರಿ: ತಾಲೂಕಿನ ಬೆಲ್ಲದ ಬಾಗೇವಾಡಿ ಗಜಾನನ ಉತ್ಸವ ಸಮಿತಿ ತನ್ನ 85ನೇ ವರ್ಷಾಚರಣೆ ನಿಮಿತ್ತ, ಸಮಿತಿ ಅಪೇಕ್ಷೆಯಂತೆ 40 ಕೆಜಿ ತೂಕದ ಬೆಳ್ಳಿ ಗಣೇಶ ವಿಗ್ರಹ ಪ್ರತಿಷ್ಠಾಪಿಸಿದೆ ಎಂದು ಸಮಿತಿ ಮಾರ್ಗದರ್ಶಕ ರಮೇಶ ಕತ್ತಿ ಗುರುವಾರ ಸುದ್ದಿಗಾರರಿಗೆ ತಿಳಿಸಿದರು.

ಮಾರ್ಗದರ್ಶಕರಾದ ಶಾಸಕ ನಿಖಿಲ ಕತ್ತಿ ಮತ್ತು ಸಮಿತಿ ಅಧ್ಯಕ್ಷ ಆರ್.ಟಿ.ಶಿರಾಳಕರ ಮಾತನಾಡಿದರು. ಸಂಭ್ರಮದಿಂದ ಗಣೇಶ ವಿಗ್ರಹವನ್ನು ಬರಮಾಡಿ ಕೊಳ್ಳಲಾಯಿತು.

ಗಜಾನನ ಉತ್ಸವ ಸಮಿತಿ ಅಧ್ಯಕ್ಷ ಆರ್.ಟಿ.ಶಿರಾಳಕರ, ಅಪ್ಪಾಸಾಹೇಬ ಖೇಮಲಾಪೂರೆ, ಮಲ್ಲಿಕಾರ್ಜುನ ಬೆಲ್ಲದ, ರಾಜು ಮುನ್ನೋಳಿ, ಸಂದೀಪ ಕತ್ತಿ, ಪೃಥ್ವಿ ಕತ್ತಿ, ಮುರಗೇಶ ಮಾಳಗೆ, ಚೇತನ ಕತ್ತಿ, ದೀಪಕ ಮಾಳಗೆ, ಮಹಾನಿಂಗ ಶೆಟ್ಟಿ, ಕಿಶೋರ ಕತ್ತಿ, ವಿನೋದ ರಾಮದುರ್ಗ, ಸಂತೋಷ ಕಡಹಟ್ಟಿ, ಮಿಥುನ ಕತ್ತಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net