75ರಲ್ಲಿ 15ರ ಹರೆಯದ ಸವಿನೆನಪುಗಳು; ಹಳೆಯ ವಿದ್ಯಾರ್ಥಿಗಳ ಸಮಾಗಮ

ವಿಜಯವಾಣಿ - 2024-07-29T125021.621
Published on

ನಾಲ್ಕೈದು ದಶಕಗಳ ನಂತರ ಮತ್ತೆ ಬೆರೆಯುತ್ತಿರುವ ಸ್ನೇಹಿತರಲ್ಲಿ, ನಾವು ಓದಿದ ನಮ್ಮ ಶಾಲೆ, ನಮ್ಮ ಸ್ನೇಹಿತರು, ನಮ್ಮ ಆಟ ಪಾಠಗಳು ಎಂಬ ಹಳೆಯ ನೆನಪುಗಳು ಮೂಡಿದೆ ಎಂದು ಬೆಂಗಳೂರಿನ ಸುಮಂಗಲಿ ಸೇವಾಶ್ರಮದ ಸ್ಥಾಪಕಾಧ್ಯಕ್ಷೆ ಡಾ.ಎಸ್.ಜಿ.ಸುಶೀಲಮ್ಮ ತಿಳಿಸಿದರು.

ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದ ಆವರಣದಲ್ಲಿ ಶನಿವಾರ ‘75ರಲ್ಲಿ 15ರ ಹರೆಯದ ಸವಿನೆನಪುಗಳು’ ಎಂಬ ಹಿರಿಯ ವಿದ್ಯಾರ್ಥಿಗಳ ಸಂಘ ಸ್ಥಾಪನಾ ಕಾರ್ಯಕ್ರಮವನ್ನು ಶನಿವಾರ ಉದ್ಘಾಟಿಸಿ ಮಾತನಾಡಿದರು. ಕಾರ್ಯಕ್ರಮಕ್ಕೆ ಆಗಮಿಸಿರುವ 70, 80, 90, ವಯಸ್ಸಿನ ಹಿರಿಯರು ಹಲವು ಇಲಾಖೆಗಳ, ಹಲವು ವಿಭಾಗಗಳ ನಿವೃತ್ತ ಅಧಿಕಾರಿಗಳು ಹಾಗೂ ಜ್ಞಾನಿಗಳು, ಆಧ್ಯಾತ್ಮ ಚಿಂತಕರು ಇಲ್ಲಿನ ವಿದ್ಯಾರ್ಥಿಗಳಿಗೆ ಮಾದರಿಯಾಗುವಂತಹ ವ್ಯಕ್ತಿತ್ವವನ್ನು ಹೊಂದಿರುತ್ತಾರೆ ಎಂದು ತಿಳಿಸಿದರು.

ಹಿರಿಯ ವಿದ್ಯಾರ್ಥಿಗಳ ಸಂಘದ ನೇಟಿವ್ ಡ್ರೀಮ್ಸ್​​ ಸಂಸ್ಥೆಯ ಸಂಸ್ಥಾಪಕ, ಮಾತೃಭಾಷಾ ಆಪ್ ಅವಿಷ್ಕರಿಸಿರುವ ಚಂದನ್ ರವಿಶಂಕರ್ ಮಾತನಾಡಿ, ಶಾಲೆಯಲ್ಲಿ ಹಿರಿಯ ವಿದ್ಯಾರ್ಥಿಗಳ ಸಂಘ ಸ್ಥಾಪನೆ ಮಾಡಲು 75 ವರ್ಷಗಳೇ ಬೇಕಾಗಿದ್ದು, ತಾವು ಕಂಡಂತೆ ಜಿಲ್ಲೆಯಲ್ಲಿಯೇ 75 ವರ್ಷಗಳನ್ನು ಕಂಡಂತಹ ಉತ್ತಮ ಪ್ರೌಢಶಾಲೆ ಯಾವುದೂ ಇಲ್ಲ. ಇದನ್ನು ಬೆಳೆಸುವ ಮೂಲಕ ಮುಂದಿನ ಪೀಳಿಗೆಯ ವಿದ್ಯಾರ್ಥಿಗಳಿಗೆ ಸಾಕಷ್ಟು ಮೂಲ ಸೌಕರ್ಯಗಳನ್ನು ಕಲ್ಪಿಸಿ ಕೊಡುವಂತಾಗಬೇಕು ಎಂದು ತಿಳಿಸಿದರು.

ಹಳೆಯ ವಿದ್ಯಾರ್ಥಿಗಳು ಸಂಘಕ್ಕೆ ಸಾವಿರಾರು ರೂ.ಗಳ ದೇಣಿಗೆ ಘೊಷಿಸಿದರು. 1964- 65ನೇ ಬ್ಯಾಚ್​ನ ಹಿರಿಯ ವಿದ್ಯಾರ್ಥಿಗಳು ಪ್ರೌಢಶಾಲಾ ಮಕ್ಕಳಿಗೆ ಕ್ರೀಡೋಪಕರಣಗಳನ್ನು ವಿತರಿಸಿದರು. ಸಲಹಾ ಸಮಿತಿ ಸದಸ್ಯೆ ಇಂದಿರಾ ಶಿವಣ್ಣ, ಹಿರಿಯ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ಡಿ.ಎಸ್.ವೆಂಕಟಪತಿ, ಪ್ರೌಢಶಾಲಾ ವಿಭಾಗದ ಉಪಪ್ರಾಂಶುಪಾಲ ಪಿ.ವೆಂಕಟೇಶ್, ಶಿಕ್ಷಕ ನಾರಾಯಣ್, ಸಮಿತಿಯ ಅಧ್ಯಕ್ಷ ಕಾಳಪ್ಪ, ನಿರ್ದೇಶಕ ಎಸ್.ಬಸವರಾಜು, ಕಾನೂನು ಸಲಹೆಗಾರ ಬಿ.ಎಂ.ಬೈರೇಗೌಡ, ಕಾರ್ಯದರ್ಶಿ ಸಿ.ಸುರೇಶ್, ಖಜಾಂಚಿ ಬಿ.ವೀಣಾ, ಶಾಲೆ ಉಸ್ತುವಾರಿ ಸಮಿತಿ ಸದಸ್ಯರಾದ ವಿಮಲಾ ಬಸವರಾಜು, ಎ.ಆರ್.ಅನೀಫುಲ್ಲ, ಪುರಸಭಾ ಮಾಜಿ ಸ್ಥಾಯಿ ಸಮಿತಿ ಅಧ್ಯಕ್ಷ ಜೆ.ಎನ್.ಶ್ರೀನಿವಾಸ್, ಸುಚಿತ್ರಾ, ಮಧು, ಚೈತ್ರಾ, ಏರ್​ವೈಸ್ ಮಾರ್ಷಲ್ ನಾಗರಾಜು ಇದ್ದರು.

ವಿಜಯಪುರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದ ಆವರಣದಲ್ಲಿ 75ರಲ್ಲಿ 15ರ ಹರೆಯದ ಸವಿನೆನಪುಗಳು ಹಿರಿಯ ವಿದ್ಯಾರ್ಥಿಗಳ ಸಂಘ ಸ್ಥಾಪನಾ ಕಾರ್ಯಕ್ರಮದಲ್ಲಿ 1954-55ನೇ ಬ್ಯಾಚ್​ನಿಂದ ಎಸ್​ಎಸ್​ಎಲ್​ಸಿ ಓದಿದ ಅಂದಿನ ಕಾಲಕ್ಕೆ ನೂರಕ್ಕೆ ನೂರು ಅಂಕ ಗಳಿಸಿದ್ದ ಪಿ.ಬಸಪ್ಪ, ಶಿಕ್ಷಕ ದಂಪತಿ ಅಚ್ಚಣ್ಣ-ಪದ್ಮಾವತಮ್ಮ, ಎಂ.ಪ್ರಭಾಕರ್, ಸಿ.ದೇವರಾಜು, ಆರ್.ವೀರಭದ್ರಪ್ಪ, ಕೆ.ಬಿ.ಬಾಲರಾಜು, ವಿ.ಎಸ್.ರಾಮಮೂರ್ತಿ, ಎಸ್.ವಿಜಯ್ ಕುಮಾರ್, ಟಿ.ನಾರಾಯಣಸ್ವಾಮಿ, ಸಿ.ಬಸಪ್ಪ, ವಿ.ಸಿ.ಸಿದ್ದರಾಜು, ವಿ.ಸಿ.ಚಂದ್ರಕುಮಾರ್, ಆರ್.ಶಿವರುದ್ರಪ್ಪ ಅವರನ್ನು ಸನ್ಮಾನಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net