ಮಾಕಾ ಲೇಔಟ್‌ನಲ್ಲಿ ಮಹಿಳೆ ಕೊರಳಲ್ಲಿನ 40 ಗ್ರಾಂ ಚಿನ್ನದ ಸರ ಸುಲಿಗೆ ಮಾಡಿಕೊಂಡು ಬೈಕ್ ಮೇಲೆ ಪರಾರಿ

ಕಲಬುರಗಿ ನಗರದ ಜೇವರ್ಗಿ ರಸ್ತೆಯಲ್ಲಿರುವ ಮಾಕಾ ಲೇಔಟ್‌ನಲ್ಲಿ ಬುಧವಾರ ರಾತ್ರಿ ನಡೆದುಕೊಂಡು ಹೋಗುತ್ತಿದ್ದ ಮಹಿಳೆಯೊಬ್ಬರ ಕೊರಳ್ಳಿನ ಚಿನ್ನದ ಸರವನ್ನು ಕಿತ್ತುಕೊಂಡು ಹೋದ ಘಟನೆ ನಡೆದಿದೆ.
crime1
Published on

ವಿಜಯವಾಣಿ ಸುದ್ದಿಜಾಲ ಕಲಬುರಗಿ
ಕಲಬುರಗಿ ನಗರದ ಜೇವರ್ಗಿ ರಸ್ತೆಯಲ್ಲಿರುವ ಮಾಕಾ ಲೇಔಟ್‌ನಲ್ಲಿ ಬುಧವಾರ ರಾತ್ರಿ ನಡೆದುಕೊಂಡು ಹೋಗುತ್ತಿದ್ದ ಮಹಿಳೆಯೊಬ್ಬರ ಕೊರಳ್ಳಿನ ಚಿನ್ನದ ಸರವನ್ನು ಕಿತ್ತುಕೊಂಡು ಹೋದ ಘಟನೆ ನಡೆದಿದೆ. ಕಳೆದ ಕೆಲವು ದಿನಗಳಿಂದ ನಿಂತಿದ್ದು ಸರಗಳ್ಳರ ಹಾವಳಿ ಮತ್ತೇ ಶುರುವಾದಂತಾಗಿದೆ. ಪೊಲೀಸರ ನಿರ್ಲಕ್ಷ್ಯ ಸಹ ಹೆಚ್ಚಿದಂತಿದೆ.
ಲೀಲಾಬಾಯಿ ಪ್ರಲ್ಹಾದರಾವ್ ಎಂಬುವರ ಕೊರಳಲ್ಲಿ ಇದ್ದ ಅಂದಾಜು ೪೦ ಗ್ರಾಂ ಚಿನ್ನದ ಸರವನ್ನು ಬೈಕ್ ಮೇಲೆ ಬಂದ ಸುಲಿಗೆಕೋರರು ಕಿತ್ತುಕೊಂಡು ಪರಾರಿಯಾಗಿದ್ದಾರೆ. ಲೀಲಾಬಾಯಿ ಅವರು ರಾಯಚೂರಿನವರು. ನೆಂಟರ ಮನೆಗೆ ಬಂದಿದ್ದರು. ಸ್ಥಳಕ್ಕೆ  ಅಶೋಕ ನಗರ ಠಾಣೆಯ ಪೊಲೀಸರು ಭೇಟಿ ನೀಡಿದ್ದಾರೆ. ಕೇಸ್ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net