ಚಿತ್ರದುರ್ಗ ಜಿಲ್ಲಾಸ್ಪತ್ರೆಯಲ್ಲಿ 40 ದಿನಗಳ ಬಾಣಂತಿ ಸಾವು

Death Case
Published on

ಚಿತ್ರದುರ್ಗ: ಬಳ್ಳಾರಿ, ಕೊಪ್ಪಳದ ಬಳಿಕ ಚಿತ್ರದುರ್ಗ ಜಿಲ್ಲಾಸ್ಪತ್ರೆಯಲ್ಲಿ ಮಂಗಳವಾರ ಸಂಜೆ ಬಾಣಂತಿ ಮೃತಪಟ್ಟಿದ್ದು ಆತಂಕ ಸೃಷ್ಟಿಯಾಗಿದೆ. ಚಳ್ಳಕೆರೆ ತಾಲ್ಲೂಕು ಜಾಗನೂರುಹಟ್ಟಿಯ ನಿವಾಸಿ ಟಿ.ಬಿ.ರೋಜಾ(27)ಮೃತ ಬಾಣಂತಿ. ಕಳೆದ ಅಕ್ಟೋಬರ್30ರಂದು ಅವರಿಗೆ ಜಿಲ್ಲಾಸ್ಪತ್ರೆಯಲ್ಲಿ ಸಿಸೇರಿಯನ್ ಆಗಿತ್ತು. ಗಂಡು ಮಗು ಜನನವಾಗಿತ್ತು.

ಹೆರಿಗೆ ಆದ ಐದು ದಿನಗಳ ಬಳಿಕ ತಾಯಿ-ಮಗುವನ್ನು ಆಸ್ಪತ್ರೆಯಿಂದ ಡಿಸ್ ಜಾರ್ಜ್ ಮಾಡಲಾಗಿತ್ತು. ಇಂದು ಬೆಳಗ್ಗೆಯಿಂದ ಐದಾರು ಬಾರಿ ವಾಂತಿಯಾಗಿ ಅಸ್ವಸ್ಥರಾಗಿದ್ದರು. ಮಂಗಳವಾರ ರೋಜಾ ಅವರಿಗೆ ಸ್ಥಳೀಯವಾಗಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ ಸಂಜೆ ಜಿಲ್ಲಾಸತ್ರೆಗೆ ದಾಖಲಿಸಲಾಗಿತ್ತು. ತುರ್ತು ಚಿಕಿತ್ಸೆ ನೀಡಿ ಐಸಿಯುಗೆ ಸ್ಥಳಾಂತರಿಸುವ ವೇಳೆ ಅಸು ನೀಗಿದ್ದಾರೆ.

ಬಾಣಂತಿ ಸಾವಿಗೆ ವೈದ್ಯರ ನಿರ್ಲಕ್ಷೃವೇ ಕಾರಣ ಎಂದು ಮೃತಳ ಸಂಬಂಧಿಕರು ದೂರಿದ್ದಾರೆ. ಬುಧವಾರ ಬೆಳಗ್ಗೆ ಮರಣೋತ್ತರ ಪರೀಕ್ಷೆ ನಡೆಯಲಿದೆ ಎಂದು ಜಿಲ್ಲಾಸ್ಪತ್ರೆ ನಿವಾಸಿ ವೈದ್ಯಾಧಿಕಾರಿ ಡಾ.ಆನಂದ್‌ಪ್ರಕಾಶ್ ತಿಳಿಸಿದ್ದಾರೆ. ನಗರ ಠಾಣೆ ಪೊಲೀಸರು ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net