4 ಕೋಟಿ ರೂ. ವೆಚ್ಚದಲ್ಲಿ ಸಮುದಾಯ ಭವನ ನಿರ್ಮಾಣ

29mnd2
Published on

ಮುಂಡಗೋಡ: ಸರ್ಕಾರದ ಮೇಲೆ ನಾನು ಒತ್ತಡ ತಂದು ಜಿಲ್ಲಾ ಮಟ್ಟದ ಸೇವಾಲಾಲ ಜಯಂತಿಯನ್ನು ತಾಲೂಕಿಗೆ ತಂದಿದ್ದು ನಿಮಗೆ ಎಷ್ಟು ಸಂತೋಷವಾಗಿದೆಯೋ ನನಗೂ ಅಷ್ಟೇ ಖುಷಿ ತಂದಿದೆ ಎಂದು ಕಾರ್ವಿುಕ ಮತ್ತು ಸಕ್ಕರೆ ಖಾತೆ ಸಚಿವ ಶಿವರಾಮ ಹೆಬ್ಬಾರ ಹೇಳಿದರು.

ಪಟ್ಟಣದ ವಿವೇಕಾನಂದ ಬಯಲು ರಂಗ ಮಂದಿರದಲ್ಲಿ ಜಿಲ್ಲಾಡಳಿತ, ಜಿ.ಪಂ. ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉತ್ತರ ಕನ್ನಡ ಆಶ್ರಯದಲ್ಲಿ ಶನಿವಾರ ಜರುಗಿದ ಜಿಲ್ಲಾ ಮಟ್ಟದ 281ನೇ ಸಂತ ಸೇವಾಲಾಲ ಜಯಂತ್ಯುತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಮುಂದಿನ ಬಜೆಟ್​ನಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಹೊಸ ಹೊಸ ಕಾರ್ಯಕ್ರಮ ನೀಡಲು ಸಜ್ಜಾಗಿದ್ದಾರೆ. ಈಗಾಗಲೇ ಬಂಜಾರ ನಿಗಮಕ್ಕೆ 100 ಕೋಟಿ ರೂ. ಅನುದಾನ ನೀಡಿದ್ದಾರೆ. ಅಲ್ಲದೆ, 4 ಕೋಟಿ ರೂ. ಅನುದಾನದಲ್ಲಿ ಜಿಲ್ಲಾ ಮಟ್ಟದ ಸಮುದಾಯ ಭವನವನ್ನು ತಾಲೂಕಿನಲ್ಲಿ ನಿರ್ವಿುಸಲಾಗುವುದು ಎಂದರು.

ಬಂಜಾರ ಶಕ್ತಿ ಪೀಠದ ಶ್ರೀ ಕುಮಾರ ಮಹಾರಾಜರು ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಡಾ. ಹರಿಲಾಲ ಪವಾರ ಉಪನ್ಯಾಸ ನೀಡಿದರು.

ಇದೇ ಸಂದರ್ಭದಲ್ಲಿ ಶ್ರೀ ಕುಮಾರ ಮಹಾರಾಜರು, ಸಚಿವ ಶಿವರಾಮ ಹೆಬ್ಬಾರ, ಜಿ.ಪಂ. ಸದಸ್ಯರಾದ ಎಲ್.ಟಿ. ಪಾಟೀಲ, ರವಿಗೌಡ ಪಾಟೀಲ, ತಹಸೀಲ್ದಾರ್ ಶ್ರೀಧರ ಮುಂದಲಮನಿ ಅವರನ್ನು ಸನ್ಮಾನಿಸಲಾಯಿತು. ಬಂಜಾರ ಸಮಾಜದ ಅಧ್ಯಕ್ಷ ಪಾಂಡುರಂಗ ಪಮ್ಮಾರ, ಜಿ.ಪಂ. ಸದಸ್ಯರಾದ ಎಲ್.ಟಿ. ಪಾಟೀಲ, ರವಿಗೌಡ ಪಾಟೀಲ, ನಾಗಭೂಷಣ ಹಾವಣಗಿ, ಗುಡ್ಡಪ್ಪ ಕಾತೂರ, ಚಿದಾನಂದ ಹರಿಜನ, ರಾಮು ಲಮಾಣಿ, ಶೇಖರ ಲಮಾಣಿ, ಪ್ರಶಾಂತ ಲಮಾಣಿ, ವೀಣಾ ರಾಠೋಡ ಇತರರಿದ್ದರು. ಇದಕ್ಕೂ ಮುನ್ನ ಪಟ್ಟಣದ ಪ್ರವಾಸಿ ಮಂದಿರದಿಂದ ಸಂತ ಸೇವಾಲಾಲ ಭಾವಚಿತ್ರದೊಂದಿಗೆ ಮಹಿಳೆಯರಿಂದ ಪೂರ್ಣ ಕುಂಭ ಮೇಳ ಮೆರವಣಿಗೆ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು.</

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net