ಬೆಸ್ಕಾಂ ಜೆಇಗೆ 4 ವರ್ಷ ಕಠಿಣ ಸಜೆ

Loka_Judgement
Published on

ತುಮಕೂರು: ವಿದ್ಯುತ್​ ಪರಿವರ್ತಕ (ಟಿಸಿ) ಬದಲಿಸಿಕೊಡಲು ಲಂಚ ಪಡೆಯುತ್ತಿದ್ದ ವೇಳೆ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ)ದ ಬಲೆಗೆ ಬಿದ್ದಿದ ಬೆಸ್ಕಾಂ ಜೂನಿಯರ್​ ಇಂಜಿನಿಯರ್​ ವಿರುದ್ಧದ ಆರೋಪ ಸಾಬೀತಾದ ಹಿನ್ನೆಲೆ 4 ವರ್ಷ ಕಠಿಣ ಕಾರಾಗೃಹ ಶಿೆ ಹಾಗೂ 10 ಸಾವಿರ ರೂ., ದಂಡ ವಿಧಿಸಿ 7ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಮಹತ್ವದ ತೀರ್ಪು ನೀಡಿದೆ.

ಕೊರಟಗೆರೆ ತಾಲೂಕು ಬೆಸ್ಕಾಂ ತೀತಾ ಶಾಖೆಯ ಜೂನಿಯರ್​ ಇಂಜಿನಿಯರ್​ ಮೊಹಮ್ಮದ್​ ರಫೀ ಟಿಸಿ ಬದಲಿಸಿಕೊಡಲು 10 ಸಾವಿರ ಲಂಚ ಸ್ವೀಕರಿಸುತ್ತಿದ್ದಾಗ ಎಸಿಬಿ ಬಲೆಗೆ ಬಿದ್ದಿದ್ದು. ಈ ಲಂಚ ಪ್ರಕರಣದ ವಿಚಾರಣೆ ನಡೆಸಿದ 7ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶೆ ಯಾಸ್ಮೀನ ಪರವೀನ ಲಾಡಖಾನ ಗುರುವಾರ 4 ವರ್ಷ ಕಠಿಣ ಜೈಲು ಶಿೆ, 10 ಸಾವಿರ ದಂಡ ತಪ್ಪಿದ್ದಲ್ಲಿ 6 ತಿಂಗಳ ಸಾದಾ ಜೈಲು ಶಿೆ ವಿಧಿಸಿ ತೀರ್ಪಿನಲ್ಲಿ ಆದೇಶಿಸಿದ್ದಾರೆ.

ಪ್ರಕರಣ ಹಿನ್ನೆಲೆ: ಬೆಸ್ಕಾಂ ತೀತಾ ಶಾಖೆ ವ್ಯಾಪ್ತಿಯ ಕೆಂಗನಪಾಳ್ಯದ ವಾಸಿ ಟಿ.ಎಂ.ರಾವೇಂದ್ರ ಎಂಬುವರ ಜಮೀನಿನಲ್ಲಿ ಸುಟ್ಟುಹೋಗಿದ್ದ ಟಿಸಿ ಬದಲಿಸಿಕೊಡಲು 10 ಸಾವಿರ ಲಂಚಕ್ಕೆ ಬೇಡಿಕೆ ಇಟ್ಟಿದ್ದ ಜೆಇ ಮೊಹಮ್ಮದ್​ ರಫೀ ಮೇ 24, 2021ರಲ್ಲಿ ಕೊರಟಗೆರೆ ಪಟ್ಟಣದ ಬೆಸ್ಕಾಂ ಎಇಇ ಕಚೇರಿ ಬಳಿ 10 ಸಾವಿರ ಲಂಚ ಪಡೆಯುವಾಗ ಎಸಿಬಿ ಪಿಐ ಎಸ್​.ವಿಜಯಲಕ್ಷಿ$್ಮ ನೇತೃತ್ವದ ಎಸಿಬಿ ತಂಡದ ಬಲೆಗೆ ಬಿದ್ದಿದ್ದರು. ಎಸಿಬಿ ಪೊಲೀಸರು ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು.

ಲೋಕಾಯುಕ್ತ ವಿಶೇಷ ಅಭಿಯೋಜಕ ಎನ್​.ಬಸವರಾಜು ವಾದ ಮಂಡಿಸಿದ್ದರು.

ಸುಳ್ಳು ಸಾಕ್ಷ್ಯ ದೂರದಾರನಿಗು ಸಂಕಷ್ಟ !

ಜೂನಿಯರ್​ ಇಂಜಿನಿಯರ್​ ಮೊಹಮ್ಮದ್​ ರಫೀ ಲಂಚ ಪ್ರಕರಣ ಸಂಬಂಧಿಸಿದ ದೂರುದಾರ ಟಿ.ಎಂ.ರಾವೇಂದ್ರ ವಿಚಾರಣೆ ವೇಳೆ ಸುಳ್ಳು ಸಾಕ್ಷ್ಯ ನುಡಿದಿದ್ದು ಈ ಕುರಿತು ಕಾರಣ ಕೇಳಿ ನ್ಯಾಯಾಲಯ ನೊಟೀಸ್​ ಜಾರಿ ಮಾಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net