ಮಾಂಸದ ಊಟ ಸೇವಿಸಿ ರಾತ್ರಿ ಮಲಗಿದವರು ಬೆಳಗ್ಗೆ ಶವವಾಗಿ ಪತ್ತೆ! ಕಾರಣ ಹೀಗಿದೆ

ವಿಜಯವಾಣಿ-2024-08-02T115205.863
Published on

ರಾಯಚೂರು: ಮಟನ್​ ತಂದು ಮನೆಯಲ್ಲಿ ಅಡುಗೆ ಮಾಡಿಕೊಂಡು ರಾತ್ರಿ ಭರ್ಜರಿ ಊಟ ಸವಿದ ಒಂದೇ ಕುಟುಂಬದ ನಾಲ್ವರು ಇದೀಗ ಮೃತಪಟ್ಟಿರುವ ಘಟನೆ ರಾಯಚೂರಿನ ಸಿರವಾರ ತಾಲೂಕಿನಲ್ಲಿ ವರದಿಯಾಗಿದೆ. ರಾತ್ರಿ ಊಟ ಮಾಡಿದ ಕುಟುಂಬಸ್ಥರು ಬೆಳಗಾಗುವುದರಲ್ಲಿ ಸಾವಿಗೀಡಾಗಿರುವುದು ಸ್ಥಳೀಯರಲ್ಲಿ ಭಾರೀ ಆತಂಕ ಉಂಟುಮಾಡಿದೆ.

ಪ್ರಾಥಮಿಕ ವರದಿಗಳ ಪ್ರಕಾರ, ಕುಟುಂಬದ ಸದಸ್ಯರು ತಿಂದ ಆಹಾರವು ವಿಷಪೂರಿತವಾದ ಕಾರಣ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ. ಆದ್ರೆ, ಈ ಬಗ್ಗೆ ಹೆಚ್ಚಿನ ತನಿಖೆ ನಡೆಯುತ್ತಿದೆ. ಸ್ಥಳಕ್ಕೆ ಬಂದ ಪೊಲೀಸರು, ಚಿಂತಾಜನಕ ಸ್ಥಿತಿಯಲ್ಲಿರುವ ಓರ್ವ ಬಾಲಕಿಯನ್ನು ರಾಯಚೂರಿನ ರಿಮ್ಸ್​ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ಕೊಡಿಸಿದ್ದಾರೆ.

ಮೇಲ್ನೋಟಕ್ಕೆ ಇದು ಆತ್ಮಹತ್ಯೆ ಎನಿಸಿದರೂ ನಿಜಾಂಶ ಏನು ಎಂಬುದು ತನಿಖೆ ಮೂಲಕ ಸ್ಪಷ್ಟವಾಗಬೇಕಿದೆ. ಒಂದೇ ಕುಟುಂಬದ ನಾಲ್ವರು ಮೃತಪಟ್ಟಿದ್ದು, ಅವರ ಮಗಳು ಮಾತ್ರ ಸದ್ಯ ಸಾವು-ಬದುಕಿನ ಮಧ್ಯೆ ಹೋರಾಟ ನಡೆಸುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net