4.98 ಲಕ್ಷ ರೂ. ಉಳಿತಾಯ ಬಜೆಟ್​

Oplus_131072
Oplus_131072
Published on

ರಾಮದುರ್ಗ:ಪಟ್ಟಣ ಪುರಸಭೆಯಲ್ಲಿ ಶುಕ್ರವಾರ ಅಧ್ಯೆ ಲಕ್ಷಿ$್ಮ ಕಡಕೋಳ ಅಧ್ಯೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಸ್ಥಾಯಿ ಸಮಿತಿ ಅಧ್ಯಕ್ಷ ಸಿದ್ರಾಮಪ್ಪ ಬೆಂಬಳಗಿ ಅವರು ಪುರಸಭೆಯ 2025&26ನೇ ಸಾಲಿನ ಬಜೆಟ್​ ಮಂಡಿಸಿದರು.

ವಿವಿಧ ಮೂಲಗಳಿಂದ ಒಟ್ಟು 33,81,009 ರೂ. ಜಮೆ ಆಗಿದ್ದು, ವಿವಿಧ ಕೆಲಸಗಳಿಗೆ 33,76,009 ರೂ. ವೆಚ್ಚ ಮಾಡಲಾಗಿದ್ದು, 4.98 ಲಕ್ಷ ರೂ. ಉಳಿತಾಯ ಬಜೆಟ್​ ಮಂಡಿಸಿದರು.

ರಾಜ್ಯ ಮತ್ತು ಕೇಂದ್ರ ಸರ್ಕಾರ ಹಾಗೂ ಸ್ಥಳಿಯವಾಗಿ ಪುರಸಭೆಗೆ ಸಂಗ್ರಹವಾಗುವ ವಿವಿಧ ರೀತಿಯ ತೆರಿಗೆ ಸೇರಿ 12,54,75,000 ರೂ. ರಾಜಸ್ವ ಸ್ವೀಕತಿ, 53,78,000 ರೂ. ಬಂಡವಾಳ ಸ್ವೀಕತಿ, 15,88,76,009 ರೂ. ಅಸಾಧಾರಣ ಸ್ವೀಕತಿ ಸೇರಿ ಒಟ್ಟು 33,81,009 ರೂ. ಅನುದಾನ ಹರಿದು ಬರುವ ನಿರೀೆ ಹೊಂದಲಾಗಿದೆ.

ವಿವಿಧ ವಾರ್ಡ್​ಗಳಲ್ಲಿ ಕೆಗೊಳ್ಳುವ ಅಭಿವದ್ಧಿ ಕಾಮಗಾರಿಗಳು, ಸಿಬ್ಬಂದಿ ವೇತನ, ಕುಡಿಯುವ ನೀರಿಗಾಗಿ ಮಾಡುವ ವೆಚ್ಚ, ಬೀದಿ ದೀಪಗಳ ನಿರ್ವಹಣೆ ಒಳಗೊಂಡು ರಾಜಸ್ವದಲ್ಲಿ 1,22,97,700 ರೂ. ವೆಚ್ಚ, ಬಂಡವಾಳ ಖಾತೆಯಲ್ಲಿ 5,57,80,000 ರೂ. ವೆಚ್ಚ, ಅಸಾಧಾರಣದಲ್ಲಿ 15,88,76,009 ರೂ. ವೆಚ್ಚ ಮಾಡಿ, 4,98,000 ರೂ. ಉಳಿತಾಯ ಬಜೆಟ್​ಗೆ ಸರ್ವ ಸದಸ್ಯರು ಸಮ್ಮತಿ ಸೂಚಿಸಿದರು.

ರಾಜ್ಯ ಹಣಕಾಸು ಆಯೋಗಕ್ಕೆ ಪುರಸಭೆ ಅಭಿವದ್ಧಿ ಕಾಮಗಾರಿ ಕೆಗೊಳ್ಳಲು 9 ಲ ರೂ. ಹಾಗೂ ಕೇಂದ್ರ ಹಣಕಾಸು ಆಯೋಗದ ಅನುದಾನದಡಿ ಪುರಸಭೆ ವ್ಯಾಪ್ತಿಯಲ್ಲಿ 185 ಲ ರೂ. ವೆಚ್ಚದಲ್ಲಿ ವಿವಿಧ ಕೆಲಸಗಳಗಳ ನಿರ್ವಹಣೆಗೆ ಕ್ರಿಯಾಯೋಜನೆ ತಯಾರಿಸಿ, ಆಯೋಗಳಿಗೆ ಸಲ್ಲಿಸಲು ನಿರ್ಧರಿಸಲಾಯಿತು.

2025&26ನೇ ಸಾಲಿನ ಆಸ್ತಿ ತೆರಿಗೆ ಶೇ. 3 ಹೆಚ್ಚಿಸಲು ಚರ್ಚಿಸಿ, ಅನುಮೋದನೆ ಪಡೆಯಲಾಯಿತು. ಮನೆಮನೆಗೆ ಪೂರೈಸುವ ಶುದ್ಧ ಕುಡಿಯುವ ನೀರಿಗೆ ಪ್ರತಿ ತಿಂಗಳು 80 ರೂ. ಹೆಚ್ಚಾಗುತ್ತಿದ್ದು, ಅದನ್ನು 70 ರೂ.ಗೆ ಇಳಿಸಲು ಸದಸ್ಯರು ಒತ್ತಾಯಿಸಿದರು.

ಉಪಾಧ್ಯೆ ಸರಿತಾ ಧೂತ, ಮುಖ್ಯಾಧಿಕಾರಿ ಈರಣ್ಣ ಗುಡದಾರಿ ಸೇರಿ ಪುರಸಭೆ ಸದಸ್ಯರು, ಅಧಿಕಾರಿಗಳು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net