

ಕಂಪ್ಲಿ: ಇಲ್ಲಿನ ವರಲಕ್ಷ್ಮೀ ಕ್ರೆಡಿಟ್ ಸಹಕಾರ ಸಂಘದ ಸಭಾಂಗಣದಲ್ಲಿ ಭಾನುವಾರ ಮಹಾಜನ ಸಭೆ ನಡೆಯಿತು.
ಸಂಘದ ಅಧ್ಯಕ್ಷ ಎಚ್.ಜಗದೀಶ್ ಮಾತನಾಡಿ, ಸಹಕಾರಿ ಸಂಘ ಕೋರ್ ಬ್ಯಾಂಕಿಂಗ್ ವ್ಯವಸ್ಥೆ ಹೊಂದಿದ್ದು, ಗ್ರಾಹಕ ಸ್ನೇಹಿಯಾಗಿದೆ. ಸಂಘವು 10,438 ಸದಸ್ಯರನ್ನು ಹೊಂದಿದ್ದು 5.90 ಕೋಟಿ ರೂ. ಷೇರು ಬಂಡವಾಳ ಹೊಂದಿದೆ.
ಇದನ್ನೂ ಓದಿ: ಸಹಕಾರ ಸಂಘದ ಸದಸ್ಯರು ಸುಸ್ತಿದಾರರಾಗದಿರಿ
10.60 ಕೋಟಿ ರೂ. ವಿವಿಧ ನಿಧಿ, 65.71 ಕೋಟಿ ರೂ. ಠೇವಣಿ ಹೊಂದಿದ್ದು, 62.08 ಕೋಟಿ ರೂ. ಸಾಲ ವಿತರಿಸಲಾಗಿದೆ. ಸಂಘ 4.23 ಕೋಟಿ ರೂ. ನಿವ್ವಳ ಲಾಭ ಗಳಿಸಿದೆ ಎಂದರು.
ಸಂಘದ ಪದಾಧಿಕಾರಿಗಳಾದ ಟಿ.ಕೊಟ್ರೇಶ್, ಎಚ್.ಮಂಜುನಾಥ, ಡಿ.ವೀರಪ್ಪ, ವಾಲಿ ಕೊಟ್ರಪ್ಪ, ಕೆ.ಸಣ್ಣ ಗವಿಸಿದ್ದಪ್ಪ, ಬಣಗಾರ ಚಂದ್ರಶೇಖರ, ಜಿ.ವೀರನಗೌಡ, ಕಾರೆ ಪಂಪಾಪತಿ, ಕವಿತಾಳ ಚನ್ನಪ್ಪ, ಕೆ.ಉಷಾರಾಣಿ ಬಿಲ್ಲನಗೌಡ, ಸಿ.ಎಚ್.ಪಕ್ಕೀರಪ್ಪ, ಎನ್.ಯಂಕಪ್ಪ, ಕಾನೂನು ಸಲಹೆಗಾರ ಎನ್.ಅಯ್ಯಪ್ಪ, ಮುಖ್ಯಕಾರ್ಯನಿರ್ವಾಹಕ ಎಂ.ಲೋಕೇಶ್ವರರೆಡ್ಡಿ ಇತರರಿದ್ದರು.