೩೭೧(ಜೆ) ಪರಿಣಾಮಕಾರಿ ಅನುಷ್ಠಾನಗೊಳಿಸಲು ಆಗ್ರಹ

IMG-20230905-WA0030
Published on

ಕಲ್ಯಾಣ ಕರ್ನಾಟಕ ಹೋರಾಟ ಸಮಿತಿ ದುಂಡು ಮೇಜಿನ ಸಭೆಯಲ್ಲಿ ಒತ್ತಾಯ
ವಿಜಯವಾಣಿ ಸುದ್ದಿಜಾಲ ಕಲಬುರಗಿ
ಸಂವಿಧಾನದ ೩೭೧(ಜೆ) ಪರಿಣಾಮಕಾರಿ ಅನುಷ್ಠಾನಕ್ಕೆ ನೂತನ ಸರ್ಕಾರ ಕ್ರಮ ಕೈಗೊಳ್ಳಬೇಕೆಂದು ಕಲ್ಯಾಣ ಕರ್ನಾಟಕ ಹೋರಾಟ ಸಮಿತಿಯಿಂದ ಸೋಮವಾರ ಇಲ್ಲಿನ ಹಿಂದಿ ಪ್ರಚಾರ ಸಭಾ ಸಭಾಂಗಣದಲ್ಲಿ ಜರುಗಿದ ದುಂಡು ಮೇಜಿನ ಸಭೆ ಆಗ್ರಹಿಸಿದೆ.
ಕಲ್ಯಾಣದ ಜನ ಅಪಾರ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಇದಕ್ಕೆ ಪೂರಕವಾಗಿ ಸರ್ಕಾರ ದಿಟ್ಟ ನಿರ್ಧಾರ ಕೈಗೊಂಡು ಕಲ್ಯಾಣ ಕರ್ನಾಟಕ ರಚನಾತ್ಮಕ ಪ್ರಗತಿಗೆ ಬದ್ಧತೆ ಪ್ರದರ್ಶಿಸುವುದು ಅಗತ್ಯ ಎಂದು ಸಮಿತಿ ಸಂಸ್ಥಾಪಕ ಅಧ್ಯP್ಷÀ ಲಕ್ಷö್ಮಣ ದಸ್ತಿ ಹೇಳಿದರು.
ಸಂವಿಧಾನದ ೩೭೧(ಜೆ) ಸಮರ್ಪಕ ಅನುಷ್ಠಾನಕ್ಕೆ ಕ್ರಮ ಕೈಗೊಳ್ಳಬೇಕು. ನೇಮಕ ಮತ್ತು ಮುಂಬಡ್ತಿಗಳಲ್ಲಿ ಕಲ್ಯಾಣದ ಅಭ್ಯರ್ಥಿಗಳಿಗೆ ಆಗುತ್ತಿರುವ ಅನ್ಯಾಯಕ್ಕೆ ಕಡಿವಾಣ ಹಾಕಬೇಕು. ನೇಮಕ ಮತ್ತು ಮುಂಬಡ್ತಿ ಸಂಪುಟ ಉಪ ಸಮಿತಿ ಪರಿಶೀಲನೆ ನಂತರವೇ ಮುಂದಿನ ಕ್ರಮ ಕೈಗೊಳ್ಳಬೇಕು. ಖಾಲಿ ಹುz್ದೆ ಭರ್ತಿ ಮಾಡಬೇಕು. ೩೭೧(ಜೆ) ನಿಯಮದಂತೆ ವಿಶೇಷ ಸ್ಥಾನಮಾನಕ್ಕೆ ಸಂಬAಧಿಸಿದ ಪ್ರಾದೇಶಿಕ ಕಚೇರಿ ಕಲಬುರಗಿಯಲ್ಲಿ ಸ್ಥಾಪಿಸಬೇಕು. ಶಾಖಾ ಕಚೇರಿಗಳು ಕಲ್ಯಾಣದ ಏಳು ಜಿಲ್ಲೆಗಳಲ್ಲಿ ಸ್ಥಾಪಿಸಬೇಕು ಎಂದು ಸಭೆಯಲ್ಲಿ ಆಗ್ರಹಿಸಲಾಗಿದೆ.
ಪ್ರತ್ಯೇಕ ಸಚಿವಾಲಯ ಸ್ಥಾಪನೆ ಮಾಡಬೇಕು. ಕೆಕೆಆರ್‌ಡಿಬಿಯಿಂದ ದೂರದೃಷ್ಟಿಕೋನದ ಐದು ವರ್ಷಗಳ ವೈe್ಞÁನಿಕ ಕ್ರಿಯಾ ಯೋಜನೆ ರೂಪಿಸಿ ಕಾಲಮಿತಿಯಲ್ಲಿ ಪ್ರಾದೇಶಿಕ ಅಸಮತೋಲನೆ ನಿವಾರಣೆಗೆ ಕ್ರಮ ಕೈಗೊಳ್ಳಬೇಕು. ನಂಜುAಡಪ್ಪ ವರದಿಯಂತೆ ಏಳು ಜಿ¯್ಲÉಗಳ ಒಂದು ವರದಿ ರಚಿಸಬೇಕು. ಈ ವರದಿ ಒಂದು ಗ್ರಾಮ ಪಂಚಾಯಿತಿಯನ್ನು ಸೂಚ್ಯಂಕ ಮಾಡಿಕೊಂಡು ವರದಿ ಸಿದ್ಧಪಡಿಸಬೇಕು ಎಂದು ಒತ್ತಾಯಿಸಲಾಗಿದೆ.
ಶಿವಕುಮಾರ ಕಲಶೆಟ್ಟಿ, ಕೆ.ಮೋಹನ್, ಸುಧಾಕರ ಎಸ್, ರಘುನಾಥ, ಶ್ರೀಕಾಂತ, ಲಿಂಗರಾಜ ಸಿರಗಾಪೂರ್, ಪ್ರೊ.ಕೇದಾರ ಪಾಟೀಲ್, ಅಬ್ದುಲï ರಹೀಂ, ಸಾಜಿದ್ ಅಲಿ ರಂಜೋಳ, ಶಾಂತಪ್ಪ ಕಾರಭಾಸಗಿ, ಸಾಬಿರ್ ಅಲಿ, ಬಸವರಾಜ ಮ್ಯಾಗಿ, ಸೂರ್ಯಕಾಂತ ಕೆ.ಬಿ., ಭೀಮರಾಯ ಕಂದಳ್ಳಿ, ಅಬ್ದುಲ್ ಖದೀರ್, ರಾಜು ಜೈನ್, ಡಾ.ಮಾಜಿದ್ ದಾಗಿ, ಮಲ್ಲಿನಾಥ ಸಂಗಶೆಟ್ಟಿ, ಶರಣಬಸಪ್ಪ, ಕೆ.ಎಸ್.ಖಾನ್, ಮಾಣಿಕ್ ಇತರರು ಪಾಲ್ಗೊಂಡಿದ್ದರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net