ಬಸ್ ಪಲ್ಟಿಯಾಗಿ 35 ಜನರಿಗೆ ಗಾಯ

Mar17byd03
Published on

ಹಾವೇರಿ: ಬ್ರೇಕ್ ಫೇಲಾಗಿ ಸಾರಿಗೆ ಸಂಸ್ಥೆ ಬಸ್ ಪಲ್ಟಿಯಾದ ಪರಿಣಾಮ 35ಕ್ಕೂ ಹೆಚ್ಚು ಪ್ರಯಾಣಿಕರು ಗಾಯಗೊಂಡ ಘಟನೆ ಬ್ಯಾಡಗಿ ತಾಲೂಕಿನ ಛತ್ರ ಗ್ರಾಮ ಬಳಿಯ ರಾಷ್ಟಿಯ ಹೆದ್ದಾರಿ-4ರಲ್ಲಿ ಬುಧವಾರ ಸಂಜೆ ನಡೆದಿದೆ.

ಬಸ್ ಗದಗನಿಂದ ರಾಣೆಬೆನ್ನೂರಿಗೆ ಹೊರಟಿತ್ತು. ಛತ್ರ ಗ್ರಾಮದ ಬಳಿ ಬರುತ್ತಿದ್ದಾಗ ಬಸ್​ನಿಂದ ಜೋರಾದ ಶಬ್ಧ ಕೇಳಿ ಬಂದಿದೆ. ಈ ವೇಳೆ ಚಾಲಕ ಬ್ರೇಕ್ ಹಾಕಿ ಬಸ್ ನಿಲ್ಲಿಸಲು ಮುಂದಾಗಿದ್ದಾರೆ. ಆದರೆ, ಬಸ್​ನ ಬ್ರೇಕ್ ಫೇಲ್ ಆಗಿದ್ದರಿಂದ ಎದೆಗುಂದದೇ ಚಾಲಕ ನಿಯಂತ್ರಣಕ್ಕೆ ತೆಗೆದುಕೊಂಡು ಪ್ರಯಾಣಿಕರ ಜೀವ ಉಳಿಸಲು ಪ್ರಯತ್ನಿಸಿದ್ದಾರೆ. ರಸ್ತೆಯ ಬದಿ ಗೋಡೆಗೆ ಬಸ್ ತಾಗುವುದನ್ನು ತಪ್ಪಿಸಿ ದಿಬ್ಬಕ್ಕೆ ತಾಗಿಸಿ ನಿಲ್ಲಿಸಲು ಪ್ರಯತ್ನಿಸುವಾಗ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ.

ಆಂಬುಲೆನ್ಸ್ ಬರುವುದು ತಡವಾಗಿದ್ದರಿಂದ ಗಾಯಾಳುಗಳು ರಸ್ತೆಯಲ್ಲಿಯೇ ಕುಳಿತು ನರಳಾಡುತ್ತಿದ್ದರು. ಬಳಿಕ ಆಗಮಿಸಿದ ಆಂಬುಲೆನ್ಸ್​ನಲ್ಲಿ ಗಾಯಾಳುಗಳನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಯಿತು. ಬ್ಯಾಡಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net