35 ಲೋಡ್ ಒಣಹುಲ್ಲು ವಿತರಣೆ

Published on

ಬ್ರಹ್ಮಾವರ: ರಾಜಧಾನಿ ರಾಜ ಯೂತ್ ಕ್ಲಬ್ ಬಾರಕೂರು ಮತ್ತು ವಿಶ್ವ ಹಿಂದು ಪರಿಷತ್ ಬಜರಂಗದಳ ಬ್ರಹ್ಮಾವರ ಪ್ರಖಂಡ ವತಿಯಿಂದ ಉಡುಪಿ ಪೇಜಾವರ ಮಠದ ಅನಾಥ ಗೋವುಗಳ ನೀಲಾವರ ಗೋಶಾಲೆಗೆ 35 ಲೋಡು ಒಣಹುಲ್ಲನ್ನು ಭಾನುವಾರ ನೀಡಿದರು.

ಕಚ್ಚೂರು ಶ್ರೀ ಮಾಲ್ತೀ ದೇವಿ ದೇವಸ್ಥಾನ ಬಳಿಯಿಂದ ಇಲ್ಲಿನ 100 ಮಂದಿ ಯುವಕರು ಸಂಗ್ರಹಿಸಿದ ಒಣಹುಲ್ಲನ್ನು ನೀಡುವ ಕಾರ್ಯಕ್ರಮಕ್ಕೆ ಬಾರಕೂರು ಶಾಂತಾರಾಮ ಶೆಟ್ಟಿ ಚಾಲನೆ ನೀಡಿದರು. ಗೋವಿಗಾಗಿ ಮೇವು ಸ್ಥಾಪಕ ಅಧ್ಯಕ್ಷ ಪ್ರಥ್ವಿರಾಜ್ ಶೆಟ್ಟಿ ಬಿಲ್ಲಾಡಿ, ಹುಬ್ಬಳಿಯ ಉದ್ಯಮಿಗಳಾದ ರತ್ನಾಕರ ಶೆಟ್ಟಿ, ಶ್ರೀನಿವಾಸ ಶೆಟ್ಟಿ, ಶ್ರೀನಿವಾಸ ಶೆಟ್ಟಿಗಾರ್ ರಂಗನಕೆರೆ, ರಾಜಧಾನಿ ಯೂತ್ ಕ್ಲಬ್‌ನ ವಿಕ್ಕಿ ಶೆಟ್ಟಿ, ರಕ್ಷಿತ್ ಬಾರಕೂರು, ರವೀಶ್ ಶೆಟ್ಟಿ ಹಳ್ಳಾಡಿ, ಭಜರಂಗದಳದ ಭರತ್ ದಾಸ್ ಇನ್ನಿತರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net