

ಬಂಟ್ವಾಳ: ಸಜೀಪಮುನ್ನೂರು ಮೂರ್ತೆದಾರರ ಸೇವಾ ಸಹಕಾರಿ ಸಂಘ 16ನೇ ಶಾಖೆ ವಾಮಂಜೂರಿನ ಬಾವಾ ಬಿಲ್ಡರ್ ಸ್ಮಾರ್ಟ್ ಸಿಟಿ ಕಟ್ಟಡದಲ್ಲಿ ಏ.30ರಂದು ಬೆಳಗ್ಗೆ 10.30ಕ್ಕೆ ಉದ್ಘಾಟನೆಗೊಳ್ಳಲಿದೆ.
ಮಾಜಿ ಸಚಿವ ಬಿ.ರಮಾನಾಥ ರೈ ಉದ್ಘಾಟಿಸಲಿರುವರು. ಸಹಕಾರಿ ಸಂಘ ಅಧ್ಯಕ್ಷ ಕೆ.ಸಂಜೀವ ಪೂಜಾರಿ ಅಧ್ಯಕ್ಷತೆ ವಹಿಸುವರು. ಭದ್ರತಾಕೋಶವನ್ನು ಶಾಸಕ ಡಾ.ವೈ.ಭರತ್ ಶೆಟ್ಟಿ ಉದ್ಘಾಟಿಸುವರು. ದ.ಕ. ಜಿಲ್ಲೆ ಸಹಕಾರ ಸಂಗಳ ಉಪನಿಬಂಧಕ ರಮೇಶ್ ಎಚ್.ಎನ್., ವಾಮಂಜೂರು ಸೇಂಟ್ ಜೋಸೆಫ್ ದಿ ವರ್ಕರ್ ಚರ್ಚ್‌ನ ಧರ್ಮಗುರು ಜೇಮ್ಸ್ ಡಿಸೋಜ, ವಾಮಂಜೂರು, ಇಸ್ಲಾಹುಲ್ ಇಸ್ಲಾಂ ಮದರಸ ಮತ್ತು ಜುಮಾಮಸ್ಜಿದ್ ಖತೀಬ ಅಬ್ದುಲ್ ರಹಿಮಾನ್ ಕೋಯ, ಗುರುಪುರ ವ್ಯವಸಾಯ ಸೇವಾ ಸಹಕಾರಿ ಸಂಘ ನಿರ್ದೇಶಕ ಓಂಪ್ರಕಾಶ್ ಶೆಟ್ಟಿ, ಮಾಜಿ ಕಾರ್ಪೋರೇಟರ್‌ಗಳಾದ ಜಯಪ್ರಕಾಶ್, ಹೇಮಲತಾ ಸಾಲ್ಯಾನ್, ರಾಜ್‌ಕುಮಾರ್ ಶೆಟ್ಟಿ ತಿರುವೈಲುಗುತ್ತು, ಗೆಜ್ಜೆಗಿರಿ ಕ್ಷೇತ್ರದ ಅಧ್ಯಕ್ಷ ರವಿ ಪೂಜಾರಿ ಚಿಲಿಂಬಿ, ಮೂಡುಶೆಡ್ಡೆ ಗ್ರಾಪಂ ಅಧ್ಯಕ್ಷ ಅನಿಲ್ ಮತ್ತಿತರರು ಭಾಗವಹಿಸುವರು.
ಅಧ್ಯಕ್ಷರಾಗಿ ಕೆ.ಸಂಜೀವ ಪೂಜಾರಿ, ಉಪಾಧ್ಯಕ್ಷರಾಗಿ ವಿಟ್ಠಲ ಬೆಳ್ಚಡ ಚೇಳೂರು, ನಿರ್ದೇಶಕರಾಗಿ ಸುಂದರ ಪೂಜಾರಿ ಬೀಡಿನಪಾಲು, ರಮೇಶ್ ಅನ್ನಪ್ಪಾಡಿ, ಗಿರೀಶ್ ಕುಮಾರ್ ಪೆರ್ವ, ಜಯಶಂಕರ್ ಕಾನ್ಸಾಲೆ, ಕೆ. ಸುಜಾತ ಎಂ., ವಾಣಿವಸಂತ, ಅರುಣ್ ಕುಮಾರ್ ಎಂ., ಆಶಿಶ್ ಪೂಜಾರಿ, ಚಿದಾನಂದ ಎಂ., ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿ ಮಮತಾ ಜಿ. ಸಂಘವನ್ನು ಮುನ್ನಡೆಸುತ್ತಿದ್ದಾರೆ.
25 ಲಕ್ಷ ರೂಪಾಯಿ ಲಾಭ
ಗ್ರಾಹಕರಿಗೆ ಕಡಿಮೆ ಬಡ್ಡಿದರದಲ್ಲಿ ಆಭರಣ ಸಾಲ, ಅಡಮಾನ ಸಾಲ, ವಾಹನ ಸಾಲ, ಮೂರ್ತೆದಾರಿಕೆ ಸಾಲ, ವ್ಯಾಪಾರ ಸಾಲ, ವೈಯಕ್ತಿಕ ಸಾಲ, ಠೇವಣಾತಿ ಸಾಲ, ಸ್ವ-ಸಹಾಯ ಸಾಲ, ಮಹಿಳೆಯರಿಗೆ ತ್ವರಿತ ಸಾಲ, ಪಿಗ್ಮಿ ಮುಂಗಡ ಸಾಲ ನೀಡಲಾಗುತ್ತಿದೆ. ಹಿರಿಯ ನಾಗರಿಕರಿಗೆ ಮತ್ತು ಸಂ ಸಂಸ್ಥೆಗಳ ಠೇವಣಿಗೆ ಶೇ.0.5 ಹೆಚ್ಚುವರಿ ಬಡ್ಡಿ ನೀಡಲಾಗುತ್ತಿದೆ, ಸಿದ್ದಕಟ್ಟೆ, ಪುಣಚ, ಬಿ.ಸಿ.ರೋಡು ಹಾಗೂ ವೇಣೂರು ಶಾಖೆಯಲ್ಲಿ ಇ-ಸ್ಟಾೃಂಪಿಂಗ್ ಸೌಲಭ್ಯವನ್ನು ಗ್ರಾಹಕರಿಗೆ ನೀಡುತ್ತಿದೆ. ಪ್ರಸ್ತುತ ಎ ತರಗತಿ ಸದಸ್ಯರು 1,917 ಇತರ ಸದಸ್ಯರು 14,632 ಒಟ್ಟು 16,548 ಸದಸ್ಯರನ್ನು ಹೊಂದಿ 48,92,93,833 ರೂಪಾಯಿ ಠೇವಣಾತಿ ಇದೆ. ಷೇರು ಮೊತ್ತ 64,19,475 ರೂ., 42,12,58,138 ರೂ. ಸಾಲ ನೀಡಿದ್ದು. 25 ಲಕ್ಷ ರೂಪಾಯಿ ಲಾಭ ಗಳಿಸಿದೆ.