ಕಲ್ಯಾಣ ಪ್ರಗತಿಗೆ 3000 ಕೋಟಿ ರೂ. ಕ್ರಿಯಾ ಯೋಜನೆ ರೂಪಿಸಲು ಕೆಕೆಕೆಆರ್ ಡಿಬಿ ಸಭೆಯಲ್ಲಿ ಒಪ್ಪಿಗೆ : ಅದ್ಯಕ್ಷ ಅಜಯಸಿಂಗ್ ಹೇಳಿಕೆ

IMG-20230830-WA0004
Published on

ವಿಜಯವಾಣಿ ಸುದ್ದಿಜಾಲ ಕಲಬುರಗಿ
ಕಲ್ಯಾಣ ಕರ್ನಾಟಕದ ಏಳು ಜಿಲ್ಲೆಗಳ ಸಮಗ್ರ ಅಭಿವೃದ್ದಿ ಮಾಡಲು ೩೦೦೦ ಕೋಟಿ ರೂ. ಕ್ರಿಯಾ ಯೋಜನೆ ರೂಪಿಸಲು ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ದಿ ಮಂಡಳಿ ಸಭೆಯಲ್ಲಿ ನಿರ್ಧರಿಸಲಾಗಿದೆ ಎಂದು ಮಂಡಳಿಯ ಅದ್ಯಕ್ಷರಾದ ಶಾಸಕ ಡಾ.ಅಜಯ ಧರ್ಮಸಿಂಗ್ ತಿಳಿಸಿದರು.

ಮುಖ್ಯಮಂತ್ರಿಗಳು ಹಾಗೂ ಹಣಕಾಸು ಇಲಾಖೆ ಅನುಮತಿ ಪಡೆದುಕೊಂಡು ಮೊದಲ ಹಂತದಲ್ಲಿ ಇಷ್ಟು ಮೊತ್ತಕ್ಕೆ ಕ್ರಿಯಾ ಯೋಜನೆ ರೂಪಿಸಲು ಒಪ್ಪಿಗೆ ನೀಡಿದೆ. ಅದರಂತೆ ಮುಂದಿನ ೧೫ ದಿನಗಳಲ್ಲಿ ಈ ಭಾಗದ ಏಳು ಜಿಲ್ಲೆಗಳ ಶಾಸಕರು ತಮ್ಮ ಕ್ಷೇತ್ರದಲ್ಲಿ ಕೈಗೆತ್ತಿಕೊಳ್ಳಬೇಕಾದ  ಮೈಕ್ರೋ ಮತ್ತು ಮ್ಯಾಕ್ರೋ ಯೋಜನೆಗಳ ಪ್ರಸ್ತಾವನೆ ಸಲ್ಲಿಸುವಂತೆ ಸಮಯ ನೀಡಲಾಗಿದೆ ‌ಎಂದು ಬುಧವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಈ ವರ್ಷವನ್ನು ಶಿಕ್ಷಣ ವರ್ಷ ಎಂದು ಅಜಯಸಿಂಗ ಘೋಷಣೆ ಮಾಡಿದರು. ಸಭೆಯಲ್ಲಿ‌ಕುರಿತು ಚರ್ಚೆ ನಡೆಸಿ  ಈ ಭಾಗದಲ್ಲಿ ಶಿಕ್ಷಕರ‌ ಕೊರತೆ ಆಗದಂತೆ‌ ನೋಡಿಕೊಳ್ಳು  ಏಳು ಜಿಲ್ಲೆಗಳಲ್ಲಿ ೩೨೦೦ ಅತಿಥಿ ಶಿಕ್ಷಕರನ್ನು ನೇಮಕ‌ ಮಾಡಿಕೊಳ್ಳಲು ಒಪ್ಪಿಗೆ ನೀಡಲಾಗಿದೆ.‌ಮುಂದಿನ  ೪೫ ದಿನಗಳಲ್ಲಿ ನೇಮಕ ಮಾಡಿಕೊಳ್ಳಲಾಗುವುದು ಎಂದು ಅಜಯಸಿಂಗ್ ತಿಳಿಸಿದರು.
ಶಾಸಕ ಅಲ್ಲಮಪ್ರಭು ಪಾಟೀಲ್,  ಕಾರ್ಯದರ್ಶಿ ಅನಿರುದ್ದ ಶ್ರವಣ, ಮುಖಂಡರಾದ ಶರಣಬಸಪ್ಪ ಭೂಸನೂರ ಇತರರು ಇದ್ದರು..

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net