

ತುಮಕೂರು: ಬೆಸ್ಕಾಂ ವಾಣಿಜ್ಯ, ಕಾರ್ಯ ಮತ್ತು ಪಾಲನಾ ವಿಭಾಗ ವ್ಯಾಪ್ತಿ ಅಂತರಸನಹಳ್ಳಿ 220 ಕೆವಿ ಸ್ವೀಕರಣಾ ಕೇಂದ್ರದ 100 ಎಂವಿಎ ಸಾಮರ್ಥ್ಯದ ಪರಿವರ್ತಕವು ವಿಫಲವಾಗಿರುವುದರಿಂದ ಸದರಿ ಪರಿವರ್ತಕ ವ್ಯಾಪ್ತಿಯಲ್ಲಿರುವ ಉಪಸ್ಥಾವರಗಳಲ್ಲಿ 30 ದಿನಗಳ ಕಾಲ ಮಧ್ಯಂತರ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.
ತುಮಕೂರು, ಮೆಳೆಕೋಟೆ, ಬಡ್ಡಿಹಳ್ಳಿ, ಊರ್ಡಿಗೆರೆ, ಸಿಟಿಕೆರೆ, ಅಂತರಸನಹಳ್ಳಿ, ಬೆಳಧರ, ಬೆಳ್ಳಾವಿ, ಹಿರೇಹಳ್ಳಿ, ಹೊನ್ನುಡಿಕೆ, ಹೆಗ್ಗೆರೆ, ಮಲ್ಲಸಂದ್ರ, ದೊಡ್ಡಸಾರಂಗಿ, ಚೇಳೂರು, ಹಾಗಲವಾಡಿ, ಹೊಸಕೆರೆ ಹಾಗೂ ನಂದಿಹಳ್ಳಿ ಕ್ರಾಸ್ನಲ್ಲಿರುವ ಐಪಿ ಫೀಡರ್ಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.
ಕೆಲವು ಸಂದರ್ಭದಲ್ಲಿ ನಗರದ ಫೀಡರ್, ಕೈಗಾರಿಕಾ ಫೀಡರ್ ಹಾಗೂ ನಿರಂತರ ಜ್ಯೋತಿ ಫೀಡರ್ಗಳಲ್ಲಿಯೂ ಸಹ ವ್ಯತ್ಯಯ ಉಂಟಾಗಲಿದೆ. ಪರಿವರ್ತಕ ದುರಸ್ತಿಗೊಳಿಸಲು ಕನಿಷ್ಟ 30 ದಿನಗಳ ಕಾಲಾವಕಾಶ ಬೇಕಾಗಿರುವುದರಿಂದ ಸಾರ್ವಜನಿಕರು ಸಮಸ್ಯೆ ಎದುರಿಸಬೇಕಿದೆ.