30 ಟನ್ ಮೀನು ಹಿಡಿದು ವಾಪಸ್ ಸಮುದ್ರಕ್ಕೆ ಚೆಲ್ಲಿದ ಮೀನುಗಾರರು!

IMG-20220919-WA0076.jpg
Published on

ಕಾರವಾರ: ಆಳ ಸಮುದ್ರದಲ್ಲಿ ಮೀನುಗಾರಿಕೆ ಬೋಟ್ ಒಂದು ಮುಳುಗಡೆಯಾಗಿದ್ದು, ಅಪಾಯದಲ್ಲಿದ್ದ ಮೀನುಗಾರರನ್ನು ರಕ್ಷಿಸಲಾಗಿದೆ.

ಕಾರವಾರದ ಬೈತಖೋಲ್ ನ ವಾಮನ ಹರಿಕಂತ್ರ ಅವರಿಗೆ ಸೇರಿದ ಪದ್ಮಾವತಿ ಬೋಟ್ ನ ತಳಭಾಗಕ್ಕೆ ಧಕ್ಕೆಯಾಗಿ ಬೋಟ್ ಮುಳುಗಡೆಯಾಗಿದೆ. ಮತ್ತೊಂದು ಬೋಟ್ ಸಹಕಾರದಲ್ಲಿ ಬೋಟ್ ನ್ನು ಬೈತಖೋಲ್ ಬಂದರಿಗೆ ಎಳೆತರಲಾಗಿದೆ.

ಬೋಟ್ ಮೀನುಗಾರಿಕೆ ಮುಗಿಸಿ ಕಾರವಾರದತ್ತ ವಾಪಸ್ ಬರುವಾಗ ಘಟನೆ ನಡೆದಿದೆ. ಹಿಡಿದಿದ್ದ ಸುಮಾರು 30 ಟನ್ ಮೀನನ್ನು ಸಮುದ್ರಕ್ಕೆ ವಾಪಸ್ ಚೆಲ್ಲುವ ಪರಿಸ್ಥಿತಿ ಬಂದಿದೆ. ಸುಮಾರು 50 ಲಕ್ಷ ರೂ. ಹಾನಿಯಾಗಿದೆ ಎಂದು ಅಂದಾಜಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net