30 ಸಾವಿರ ತಂಬಾಕು ಸಸಿಗಳು ನಾಶ

HUN-MAY-29-1(GOWRIPURA TOBACCO)
ಹುಣಸೂರು ತಾಲೂಕಿನ ಗೌರಿಪುರದಲ್ಲಿ ಕಿಡಿಗೇಡಿಗಳ ಕೃತ್ಯಕ್ಕೆ ಹಾನಿಗೊಳಗಾಗಿರುವ ತಂಬಾಕು ಟ್ರೇ ಸಸಿ ಮಡಿಗಳು.
Published on

ಹುಣಸೂರು: ಕಿಡಿಗೇಡಿಗಳ ಕೃತ್ಯದಿಂದಾಗಿ 30 ಸಾವಿರ ತಂಬಾಕು ಸಸಿಗಳು ಕೊಳೆತು ನಾಶವಾಗಿವೆ.

ತಾಲೂಕಿನ ಬಿಳಿಕೆರೆ ಹೋಬಳಿ ಗೌರಿಪುರ ಗ್ರಾಮದ ಮಹೇಶ್ ಅವರು ತಮ್ಮ ಜಮೀನಿನಲ್ಲಿ ನಾಟಿ ಮಾಡಲು ಟ್ರೇನಲ್ಲಿ ತಂಬಾಕು ಸಸಿಗಳನ್ನು ಇಟ್ಟಿದ್ದರು. ಸಸಿಗಳಿಗೆ ಬಳಸುತ್ತಿದ್ದ ನೀರಿನ ಡ್ರಂಗೆ ಕಿಡಿಗೇಡಿಗಳು ಕ್ರಿಮಿನಾಶಕ ಔಷಧ ಮಿಶ್ರಣ ಮಾಡಿದ್ದರು. ಅದನ್ನು ಅರಿಯದ ಮಹೇಶ್ ನೀರನ್ನು ಟ್ರೇಗಳಿಗೆ ಹಾಕಿದ ಪರಿಣಾಮ ಸಸಿಗಳು ಒಂದೇ ದಿನದಲ್ಲಿ ಮುರುಟಿ ಕೊಳೆತು ನಾಶವಾಗಿವೆ. ಪ್ರಕರಣದ ಸಂಬಂಧ ಬಿಳಿಕೆರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net