

ಸಿದ್ದಾಪುರ: ತಾಲೂಕಿನ ಕಾನಳ್ಳಿ ಗ್ರಾಮದ ಅರಣ್ಯ ಪ್ರದೇಶದಲ್ಲಿ ಅಕ್ರಮವಾಗಿ ಕಳ್ಳಬಟ್ಟಿ ಸಾರಾಯಿ ತಯಾರಿಸುತ್ತಿದ್ದ ಸ್ಥಳಕ್ಕೆ ಅಬಕಾರಿ ಇಲಾಖೆ ಅಧಿಕಾರಿಗಳು ಮಂಗಳವಾರ ಸಂಜೆ ದಾಳಿ ನಡೆಸಿ 3,000 ರೂ. ಮೌಲ್ಯದ ಪರಿಕರಗಳನ್ನು ವಶಪಡಿಸಿಕೊಂಡಿದ್ದಾರೆ. ಕಳ್ಳಬಟ್ಟಿ ಸಾರಾಯಿ ತಯಾರಿಸುತ್ತಿದ್ದ ವ್ಯಕ್ತಿ ಪರಾರಿ ಆಗಿದ್ದಾನೆ. ಪರಾರಿ ಆದ ವ್ಯಕ್ತಿ ರಾಮಚಂದ್ರ ಕನ್ನಾ ನಾಯ್ಕ ಎಂದು ತಿಳಿದು ಬಂದಿದೆ. ಜಿಲ್ಲಾ ಅಬಕಾರಿ ಉಪ ಆಯುಕ್ತ ಶಿವನಗೌಡ ನಿರ್ದೇಶನದಲ್ಲಿ ಶಿರಸಿ ಉಪವಿಭಾಗದ ಅಬಕಾರಿ ನಿರೀಕ್ಷಕ ಮಹೇಂದ್ರ ಎಸ್. ನಾಯ್ಕ ಪ್ರಕರಣ ದಾಖಲಿಸಿಕೊಂಡಿದ್ದಾರೆ. ದಾಳಿಯಲ್ಲಿ ಗಜಾನನ ಎಸ್. ನಾಯ್ಕ, ಎನ್.ಕೆ. ವೈದ್ಯ, ಈರಣ್ಣ ಗಾಳಿ, ಲೋಕೇಶ್ವರ ಬೋರ್ಕರ್ ಪಾಲ್ಗೊಂಡಿದ್ದರು.