

ಕಲಬುರಗಿ: ರಾಜ್ಯದ ಎಲ್ಲ ನೂತನ ತಾಲೂಕು ಕೇಂದ್ರಗಳಲ್ಲಿ ಹೊಸ ಕಂದಾಯ ಕಚೇರಿಗಳನ್ನು ಮೂರು ವರ್ಷದಲ್ಲಿ ನಿರ್ಮಿಸಲಾಗುವುದು ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಭರವಸೆ ನೀಡಿದರು.
ಹೊಸ ತಾಲೂಕುಗಳಿಗೆ ತಹಸೀಲ್ದಾರ್ ಕಚೇರಿ ಮಾತ್ರ ಇವೆ. ಉಳಿದ ಇಲಾಖೆಗಳ ತಾಲೂಕು ಕಚೇರಿಗಳಿಲ್ಲ. ಮುಂದಿನ ಮೂರು ವರ್ಷದಲ್ಲಿ ಹಂತ ಹಂತದಲ್ಲಿ ತಾಲೂಕು ಕಚೇರಿ ಪೂರ್ಣಗೊಳಿಸಲಾಗುವುದು ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಕಂದಾಯ ಇಲಾಖೆಯ ಎಲ್ಲ ದಾಖಲೆ ಡಿಜಿಟಲೀಕರಣ ಮಾಡಲು ಭೂ ಆಧಾರ ಯೋಜನೆ ರೂಪಿಸಿದ್ದು, ಯಾರದ್ದೋ ಜಮೀನು ಇನ್ಯಾರೋ ಪಡೆಯುವುದು ತಡೆಯಲು ಪಹಣಿ ಆಧಾರ ಜೋಡಣೆ ಅಭಿಯಾನ ನಡೆಸಿದ್ದು, ನಾಲ್ಕು ಕೋಟಿ ಮಾಲೀಕರು ಇದ್ದು, ಈಗಾಗಲೇ ೧.೭೫ ಕೋಟಿ ಮಾಲೀಕರು ಜೋಡಣೆ ಮಾಡಿದ್ದಾರೆ. ಅದರಲ್ಲಿ ೨೪ ಲಕ್ಷ ರೈತರು ಮೃತಪಟ್ಟಿದ್ದಾರೆ. ಈ ಅಭಿಯಾನದಿಂದ ಶಾಶ್ವತವಾಗಿ ಜಮೀನಿಗೆ ಭದ್ರತೆ ಕೊಡಲು ಸಾಧ್ಯ ಎಂದರು.
ಇ- ಕಚೇರಿ ಅನುಷ್ಠಾನದಲ್ಲಿ ಶೇ.೮೦ ಪ್ರಗತಿ ಸಾಧಿಸಲಾಗಿದೆ. ಭೂ ಸುರಕ್ಷಾ ಯೋಜನೆಯಡಿ ಫೆಬ್ರವರಿಯಲ್ಲಿ ರಾಜ್ಯದ ೩೧ ತಾಲೂಕು ಕಚೇರಿಯಲ್ಲಿ ಪ್ರಾಯೋಗಿಕವಾಗಿ ರೆಕಾರ್ಡ್ ರೂಂ ದಾಖಲೀಕರಣ ಆರಂಭಿಸಿದ್ದು, ಮೂರು ಕೋಟಿ ದಾಖಲೆ ಸ್ಕಾÈನಿಂಗ್ ಮಾಡಲಾಗಿದೆ. ಮುಂದಿನ ತಿಂಗಳಲ್ಲಿ ಎಲ್ಲ ತಾಲೂಕುಗಳಲ್ಲಿ ಡಿಜಿಟಲೀಕರಣ ಆರಂಭಿಸಲಾಗುವುದು ಎಂದರು.
ಗ್ರಾಮ ಲೆಕ್ಕಾಧಿಕಾರಿಗಳು, ಆರ್‌ಐಗಳಿಗೆ ಲ್ಯಾಪ್‌ಟಾಪ್ ವಿತರಿಸುತ್ತಿದ್ದು, ಅವರು ಹಳ್ಳಿಯಲ್ಲೇ ಕುಳಿತು ಕೆಲಸ ಮಾಡಬಹುದು. ಹಳ್ಳಿಯಲ್ಲಿ ಕುಳಿತು ಕೆಲಸ ಮಾಡಬಹುದು. ಕಂದಾಯ ಕೋರ್ಟ್ ಪ್ರಕರಣದ ಸ್ಥಿತಿಗತಿ ಅರಿಯಲು ಆರ್‌ಸಿಸಿಎಂಎಸ್ (ರೆವೆನ್ಯೂ ಕೋರ್ಟ್ ಕೇಸ್ ಮ್ಯಾನೇಜಮೆಂಟ್ ಸಿಸ್ಟಮ್) ತಂತ್ರಾAಶ ಅಭಿವೃದ್ಧಿಪಡಿಸಲಾಗಿದೆ ಎಂದರು.
ಕAದಾಯ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿ ರಾಜೇಂದ್ರ ಕುಮಾರ ಕಠಾರಿಯಾ, ಸರ್ಕಾರದ ಪ್ರಧಾನ ಕಾರ್ಯದರ್ಶಿ (ವಿಪತ್ತು ನಿರ್ವಹಣೆ) ವಿ. ರಶ್ಮಿ ಮಹೇಶï, ಕಂದಾಯ ಇಲಾಖೆಯ ಆಯುಕ್ತ ಪಿ. ಸುನೀಲಕುಮಾರ, ಪ್ರಾದೇಶಿಕ ಆಯುಕ್ತ ಕೃಷ್ಣ ಬಾಜಪೇಯಿ ಇದ್ದರು.