ನೀರಿನ ಹೊಂಡಕ್ಕೆ ಮಗು ಬಲಿ

magu death
ಕೃತಿಕಾ
Published on

ಹೆಬ್ರಿ (ಉಡುಪಿ): ಅಜ್ಜಿಯೊಂದಿಗೆ ನಡೆದುಕೊಂಡು ಹೋಗುತ್ತಿದ್ದ ಮೂರು ವರ್ಷದ ಮಗು ಆಕಸ್ಮಿಕವಾಗಿ ಕಾಲುಜಾರಿ ನೀರಿನ ಹೊಂಡಕ್ಕೆ ಬಿದ್ದು ಮೃತಪಟ್ಟ ಘಟನೆ ಸೋಮವಾರ ನಾಲ್ಕೂರು ಗ್ರಾಮದಲ್ಲಿ ನಡೆದಿದೆ.

ಉಡುಪಿ ತಾಲೂಕು ನಾಲ್ಕೂರು ಗ್ರಾಮದ ಕಜ್ಕೆ ಅರಮನೆ ಜಿಡ್ಡು ನಿವಾಸಿ ಸಂತೋಷ್ ಬೋವಿ ಎಂಬುವರ ಪುತ್ರಿ ಕೃತಿಕಾ(3)ಮೃತಪಟ್ಟವರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net