ಫಾಲ್ಸ್‌ಗೆ ಬಿದ್ದ ಯುವಕನ ಮೃತದೇಹ ವಾರ ಬಳಿಕ ಪತ್ತೆ

sharath
Published on

ಕುಂದಾಪುರ (ಉಡುಪಿ): ಕೊಲ್ಲೂರು ಅರಶಿನಗುಂಡಿ ಜಲಪಾತ ವೀಕ್ಷಣೆ ವೇಳೆ ಕಾಲು ಜಾರಿ ಬಿದ್ದು ನೀರುಪಾಲಾಗಿದ್ದ ಶಿವಮೊಗ್ಗದ ಭದ್ರಾವತಿ ಮೂಲದ ಶರತ್ ಕುಮಾರ್ (23) ಮೃತದೇಹ ವಾರದ ಬಳಿಕ ಭಾನುವಾರ ಪತ್ತೆಯಾಗಿದೆ.

ಜು.23ರಂದು ಶರತ್ ಸ್ನೇಹಿತನೊಂದಿಗೆ ಜಲಪಾತ ಬಳಿಗೆ ಹೋಗಿ, ಬಂಡೆ ಕಲ್ಲಿನ ಮೇಲೆ ನಿಂತಿದ್ದ ವೇಳೆ ಜಾರಿ ನೀರಿಗೆ ಬಿದ್ದಿದ್ದರು. ಹಲವು ತಂಡಗಳು ಶರತ್‌ಗಾಗಿ ಹುಡುಕಾಟ ನಡೆಸಿದ್ದವು. ತೀವ್ರ ಮಳೆ ಮತ್ತು ನೀರಿನ ರಭಸ ಕಾರ್ಯಾಚರಣೆಗೆ ಅಡ್ಡಿಯಾಗುತ್ತಿತ್ತು. ಇದೀಗ ವಾರದ ಬಳಿಕ ಶರತ್ ಬಿದ್ದ ಜಾಗದಿಂದ ಹತ್ತು ಮೀಟರ್ ದೂರದಲ್ಲಿ ಮೃತದೇಹ ಪತ್ತೆಯಾಗಿದೆ. ಕೊಲ್ಲೂರು ಪೊಲೀಸರು, ಎಸ್‌ಡಿಆರ್‌ಎಫ್, ಅರಣ್ಯ ಇಲಾಖೆ, ಅಗ್ನಿಶಾಮಕ ದಳದ ಸಿಬಂದಿ, ಸ್ಥಳೀಯರು, ಶರತ್ ಅವರ ಸ್ನೇಹಿತರು, ಸಂಬಂಧಿಕರು ಪ್ರತಿ ದಿನ ಹಗಲಿಡೀ ಹುಡುಕಾಟ ನಡೆಸಿದ್ದರು. ಈಶ್ವರ್ ಮಲ್ಪೆ, ಜ್ಯೋತಿರಾಜ್ ತಂಡವೂ ಹುಡುಕಾಟ ನಡೆಸಿತ್ತು. ಸಾಗರ ಬಾರಕೂರು ಅವರ ನೇತೃತ್ವದಲ್ಲಿ ಡ್ರೋನ್ ಕ್ಯಾಮರಾ ಬಳಸಿಯೂ ಶೋಧ ಮಾಡಲಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net