

ಚಿಂತಾಮಣಿ: ಚಿಂತಾಮಣಿ-ಮದನಪಲ್ಲಿ ರಸ್ತೆಯ ದಂಡುಪಾಳ್ಯ ಸಮೀಪ ಬುಧವಾರ ಸಂಜೆ 6.30 ಸುಮಾಗೆ ಟೆಂಪೋ ಟ್ರಾವೆಲರ್ ಮತ್ತು ಕಾರಿನ ನಡುವೆ ಡಿಕ್ಕಿ ಸಂಭವಿಸಿ ಮೂವರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಅಪಘಾತದಲ್ಲಿ ಹಲವರು ಗಾಯಗೊಂಡಿದ್ದಾರೆ.
ಮೃತಪಟ್ಟವರು ಆಂಧ್ರಪ್ರದೇಶದ ನಲ್ಲೂರಿನವರಾಗಿದ್ದು, ಕಾರಿನ ಚಾಲಕ ಶ್ರೀಕಾಂತ್ (35), ಶ್ರೀನಿವಾಸುಲು (50) ಮತ್ತು ಪುಷ್ಪ (50) ಎಂದು ಗುರುತಿಸಲಾಗಿದೆ.
ಟೆಂಪೋ ಟ್ರಾವೆಲರ್‌ನ ಚಾಲಕ ಸೇರಿ 10 ಜನಕ್ಕೆ ಗಾಯಗಳಾಗಿವೆ. ಲವಕುಮಾರ್ (34), ಆದ್ಯ (7), ಕಿಶೋರ್‌ಕುಮಾರ್ (44), ಮನುತೇಜ್ (8), ಹಿಮಶ್ರೀ (5), ನಾಗೇಂದ್ರ (28), ಗುರುಸ್ವಾಮಿ (55), ರಮ್ಯ (37), ವಿಹಾನ್ (9) ಹಾಗೂ ಜಗದೀಶ್ವರಿ (45) ಗಾಯಾಳುಗಳಾಗಿದ್ದು, ಎಲ್ಲರೂ ಬೆಂಗಳೂರಿನವರು ಎನ್ನಲಾಗಿದೆ.
ಆಂಧ್ರಪ್ರದೇಶ ನೋಂದಣಿ ಸಂಖ್ಯೆ ಕಾರು ಂತಾಮಣಿಯಿಂದ ಮದನಪಲ್ಲಿ ಕಡೆಗೆ ಹೋಗುತ್ತಿದ್ದಾಗ ದಂಡುಪಾಳ್ಯ ಬಳಿ
ಟೆಂಪೋ ಟ್ರಾವೆಲರ್ ನಡುವೆ ಡಿಕ್ಕಿ ಸಂಭವಿಸಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಕೆಂಚಾರ‌್ಲಹಳ್ಳಿ ಠಾಣೆಯ ಪ್ರಭಾರ ಇನ್‌ಸ್ಪೆಕ್ಟರ್ ಶಿವರಾಜ್ ಮತ್ತು ಸಿಬ್ಬಂದಿ ಸ್ಥಳಕ್ಕೆ ಭೇಟಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.