ಓದುವ ಹವ್ಯಾಸದಿಂದ ಮಕ್ಕಳ ಜ್ಞಾನವೃದ್ಧಿ : ಪುರೋಹಿತ ಕೆ.ರಾಮಕೃಷ್ಣ ಆಚಾರ್ಯ ಅಭಿಮತ

New Project (7)
Published on

ಕುಂಬಳೆ: ಪೋಷಕರೂ ಮಕ್ಕಳಿಗೆ ಕನ್ನಡ ಪುಸ್ತಕಗಳನ್ನು ಓದುವ ಆಸಕ್ತಿ ರೂಢಿಸಬೇಕು. ಇದರಿಂದ ಎಳೆಯ ಮಕ್ಕಳಲ್ಲಿ ಜ್ಞಾನವೃದ್ಧಿಯಾಗುತ್ತದೆ ಎಂದು ಆರಿಕ್ಕಾಡಿ ಕಾರ್ಳೆ ಕಾಳಿಕಾಂಬಾ ದೇವಸ್ಥಾನ ತಂತ್ರಿ ಪುರೋಹಿತ ಕೆ.ರಾಮಕೃಷ್ಣ ಆಚಾರ್ಯ ಹೇಳಿದರು.

ಕೇರಳ ರಾಜ್ಯ ಕನ್ನಡ ಚುಟುಕು ಸಾಹಿತ್ಯ ಪರಿಷತ್ತಿನ ಕಾಸರಗೋಡು ಜಿಲ್ಲಾ ಘಟಕ ಆಶ್ರಯದಲ್ಲಿ ಶನಿವಾರ ಸೂರಂಬೈಲು ಸರ್ಕಾರಿ ಪ್ರೌಢಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಕನ್ನಡ ಸಾಹಿತ್ಯ ಮಾರ್ಗದರ್ಶನ ಅಭಿಯಾನದ 2ನೇ ಶಿಬಿರ ಉದ್ಘಾಟಿಸಿ ಮಾತನಾಡಿದರು.

ಶಿಕ್ಷಣ ತಜ್ಞ ವಿ.ಬಿ. ಕುಳಮರ್ವ ಅಧ್ಯಕ್ಷತೆ ವಹಿಸಿದ್ದರು. ಪರಿಷತ್ ಕೇಂದ್ರ ಸಮಿತಿ ಸ್ಥಾಪಕ ಸಂಚಾಲಕ ಡಾ.ಕೆ.ವಾಮನ್ ರಾವ್ ಬೇಕಲ್, ಕಾಸರಗೋಡಿನ ಕನ್ನಡ ಭವನ ಪ್ರಕಾಶನ ಮುಖ್ಯಸ್ಥೆ ಸಂಧ್ಯಾರಾಣಿ, ಪರಿಷತ್ತಿನ ಕಾಸರಗೋಡು ಜಿಲ್ಲಾಧ್ಯಕ್ಷ ವಿರಾಜ್ ಅಡೂರು, ಪರಿಷತ್ತಿನ ದಕ್ಷಿಣ ಕನ್ನಡ ಜಿಲ್ಲಾ ಘಟಕ ಅಧ್ಯಕ್ಷ ಡಾ.ಕೊಳ್ಚಪ್ಪೆ ಗೋವಿಂದ ಭಟ್, ನಿವೃತ್ತ ಮುಖ್ಯ ಶಿಕ್ಷಕಿ ಶಾರದಾ ಮೊಳೆಯಾರ್ ಎಡನೀರು, ಪಿಟಿಎ ಉಪಾಧ್ಯಕ್ಷ ದಯಾನಂದ ಪೆರ್ಣೆ, ಹೇಮಲತಾ ಮೊದಲಾದವರಿದ್ದರು. ಶಿಕ್ಷಕಿ ಚಿತ್ರಕಲಾ ದೇವರಾಜ ಆಚಾರ್ಯ ಸ್ವಾಗತಿಸಿದರು. ದರ್ಶಿನ್ ಚಿರಾಲ್ ಡಿ., ಧನ್ವಿಕಾ ಡಿ. ಪ್ರಾರ್ಥಿಸಿದರು. ದೇವರಾಜ ಆಚಾರ್ಯ ಸೂರಂಬೈಲ್ ನಿರೂಪಿಸಿದರು. ಶಿಕ್ಷಕ ಚಂದ್ರಶೇಖರ ಡಿ. ವಂದಿಸಿದರು.

ಪ್ರಬಂಧ ರಚನಾ ತರಬೇತಿ

ಪ್ರಬಂಧ ರಚನಾ ತರಬೇತಿಯಲ್ಲಿ ವಿ.ಬಿ.ಕುಳಮರ್ವ, ಕವನ ರಚನಾ ತರಬೇತಿಯಲ್ಲಿ ಡಾ.ಕೊಳ್ಚಪ್ಪೆ ಗೋವಿಂದ ಭಟ್ ಹಾಗೂ ವ್ಯಂಗ್ಯಚಿತ್ರ ರಚನಾ ತರಬೇತಿಯಲ್ಲಿ ವಿರಾಜ್ ಅಡೂರು ಮಾರ್ಗದರ್ಶನ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net