ಮಹಾಗಣಪತಿ ದೇವಸ್ಥಾನದ 29ನೇ ವರ್ಧಂತಿ ಉತ್ಸವ

16 ylp 04 (ganapati)
Published on

ಯಲ್ಲಾಪುರ: ಪಟ್ಟಣದ ಗಣೇಶಪುರಂ ವಿಶ್ವ ಹಿಂದು ಪರಿಷತ್ತಿನ ನವಗ್ರಹ ಸಹಿತ ಮಹಾಗಣಪತಿ ದೇವಸ್ಥಾನದ 29ನೇ ವರ್ಧಂತಿ ಉತ್ಸವ ಶುಕ್ರವಾರ ವಿವಿಧ ಧಾರ್ವಿುಕ ಕಾರ್ಯಕ್ರಮಗಳೊಂದಿಗೆ ನಡೆಯಿತು.

ಅಥರ್ವಶೀರ್ಷ ಹವನ, ಪಂಚಾಮೃತಾಭಿಷೇಕ, ದೂರ್ವಾರ್ಚನೆ ಸೇರಿ ವಿವಿಧ ಧಾರ್ವಿುಕ ಕಾರ್ಯಕ್ರಮಗಳು ನಡೆದವು. ಮಹಾಗಣಪತಿ ದೇವರಿಗೆ ಉತ್ಸವದ ಪ್ರಯುಕ್ತ ವಿಶೇಷ ಅಲಂಕಾರ ಮಾಡಲಾಗಿತ್ತು. ಮಧ್ಯಾಹ್ನ ನಡೆದ ಸಾರ್ವಜನಿಕ ಅನ್ನ ಸಂತರ್ಪಣೆಯಲ್ಲಿ ಸುತ್ತಮುತ್ತಲಿನ ಸಾವಿರಾರು ಜನ ಅನ್ನಪ್ರಸಾದ ಸ್ವೀಕರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net