28,000 ಫಲಾನುಭವಿಗಳಿಗೆ ನೇತ್ರ ಶಸ್ತ್ರ ಚಿಕಿತ್ಸೆ

30mdl02
ಮುದಗಲ್ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಆಯೋಜಿಸಿದ್ದ ಉಚಿತ ನೇತ್ರ ಚಿಕಿತ್ಸಾ ಶಿಬಿರಕ್ಕೆ ಗಣೇಶ ಪೂಜೆ ಮಾಡುವ ಮೂಲಕ ಚಾಲನೆ ನೀಡಲಾಯಿತು. ದಿವ್ಯದೃಷ್ಟಿ ಫೌಂಡೇಶನ್ ಕಾರ್ಯದರ್ಶಿ ಡಾ.ಗುರುರಾಜ ದೇಶಪಾಂಡೆ, ವಿವೇಕಾನಂದ ಆಶ್ರಮದ ಸಿಇಒ ಕೃಷ್ಣಮೂರ್ತಿ, ಪುರಸಭೆ ಉಪಾಧ್ಯಕ್ಷ ಎಸ್.ಕೆ.ಅಜಮೀರ ಬೆಳ್ಳಿಕಟ್ ಪ್ರಮುಖರಾದ ಡಾ.ಪೃಥ್ವಿ ಸೂಗೂರ, ಡಾ.ಗೀತಾಂಜಲಿ, ಡಾ.ಶಮೀಬ ಸುಳ್ಳದ, ಡಾ.ಅಭಿನವ ದೇಶಪಾಂಡೆ, ರಾಘವೇಂದ್ರ ದೇಶಪಾಂಡೆ, ಸವಿತಾ ಅನಂತ ದೇಶಪಾಂಡೆ, ಪ್ರಾಣೇಶ ಮುತಾಲಿಕ ಇತರರಿದ್ದರು.
Published on

ಮುದಗಲ್: ಉಚಿತ ನೇತ್ರ ಶಸ್ತ್ರ ಚಿಕಿತ್ಸಾ ಶಿಬಿರಗಳು ಬಡವರಿಗೆ ವರದಾನವಾಗಿದ್ದು, ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ದಿವ್ಯದೃಷ್ಟಿ ಫೌಂಡೇಶನ್ ಕಾರ್ಯದರ್ಶಿ ಡಾ.ಗುರುರಾಜ ದೇಶಪಾಂಡೆ ಹೇಳಿದರು.

ಸ್ಥಳೀಯ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಜಿಲ್ಲಾ ಅಂಧತ್ವ ನಿವಾರಣಾ ಘಟಕ ರಾಯಚೂರು, ದಿವ್ಯದೃಷ್ಠಿ ಫೌಂಡೆಶನ್, ಸಮುದಾಯ ಆರೋಗ್ಯ ಕೇಂದ್ರ ಮುದಗಲ್ ಸಂಯುಕ್ತಾಶ್ರಯದಲ್ಲಿ ಉಚಿತ ನೇತ್ರ ಶಸ್ತ್ರ ಚಿಕಿತ್ಸಾ ಶಿಬಿರದಲ್ಲಿ ಶುಕ್ರವಾರ ಮಾತನಾಡಿದರು.

ಜಿಲ್ಲೆಯಲ್ಲಿ ಸುಮಾರು 58ಸಾವಿರ ನೇತ್ರ ಶಸ್ತ್ರ ಚಿಕಿತ್ಸೆಗಳನ್ನು ವಿವೇಕಾನಂದಾಶ್ರಮ ನೇತೃತ್ವದಲ್ಲಿ ಯಶಸ್ವಿಯಾಗಿವೆ. ವಿಶೇಷವಾಗಿ ಲಿಂಗಸುಗೂರ ತಾಲೂಕಿನಲ್ಲಿ ಅಂದಾಜು 28,000 ಫಲಾನುಭವಿಗಳಿಗೆ ನೇತ್ರ ಶಸ್ತ್ರ ಚಿಕಿತ್ಸೆ ಮಾಡಿರುವುದು ಹೆಮ್ಮೆಯ ವಿಷಯ ಎಂದರು.

ವಿವೇಕಾನಂದ ಆಶ್ರಮದ ಸಿಇಒ ಕೃಷ್ಣಮೂರ್ತಿ, ಪುರಸಭೆ ಉಪಾಧ್ಯಕ್ಷ ಎಸ್.ಕೆ.ಅಜಮೀರ ಬೆಳ್ಳಿಕಟ್ ಪ್ರಮುಖರಾದ ಡಾ.ಪೃಥ್ವಿ ಸೂಗೂರ, ಡಾ.ಗೀತಾಂಜಲಿ, ಡಾ.ಶಮೀಬ ಸುಳ್ಳದ, ಡಾ.ಅಭಿನವ ದೇಶಪಾಂಡೆ, ರಾಘವೇಂದ್ರ ದೇಶಪಾಂಡೆ, ಸವಿತಾ ಅನಂತ ದೇಶಪಾಂಡೆ, ಪ್ರಾಣೇಶ ಮುತಾಲಿಕ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net