ಪಾರಂಪರಿಕ ವೈದ್ಯ ಪರಿಷತ್ತಿಗೆ ಜಮೀನು ದಾನ

889
Published on

ಕುದೂರು:  ಬೆಂಗಳೂರಿನ ಮಾದಾವರ ಬಳಿ ಐದು ಎಕರೆ ಜಮೀನನ್ನು ಪಾರಂಪರಿಕ ವೈದ್ಯ ಪರಿಷತ್ತಿಗೆ ದಾನವಾಗಿ ನೀಡಿದ ಸೋಲೂರು ಹೋಬಳಿಯ ಪಾಲನಹಳ್ಳಿ ಮಠದ ಶ್ರೀ ಡಾ. ಸಿದ್ದರಾಜು ಸ್ವಾಮೀಜಿ ಅವರನ್ನು ಪರಿಷತ್ತಿನ ಕಾರ್ಯಕಾರಿ ಮಂಡಳಿ ಸದಸ್ಯರು ಸನ್ಮಾನಿಸಿದರು.

ಮೈಸೂರು ಮಹಾರಾಜರು 5 ಎಕರೆ ಜಮೀನನ್ನು ನೀಡಿದ್ದು, ಬಳಿಕ ಭಗವತಿ ದೇವಾಲಯದ ಟ್ರಸ್ಟ್‌ನಲ್ಲಿದ್ದ ಭೂಮಿಯನ್ನು ಟ್ರಸ್ಟ್‌ನ ಎಲ್ಲ ಸದಸ್ಯರ ಸರ್ವಾನುಮತದ ಒಪ್ಪಿಗೆ ಮೇರೆಗೆ ದಾನವಾಗಿ ಪರಿಷತ್ತಿಗೆ ನೀಡಲಾಗಿದೆ ಎಂದು ಶ್ರೀಗಳು ತಿಳಿಸಿದರು.

ಪಾರಂಪರಿಕ ವೈದ್ಯ ಪರಿಷತ್ತಿನ ಅಧ್ಯಕ್ಷ ಮಹಾದೇವ ಮಾತನಾಡಿ, ಪಾರಂಪರಿಕವಾಗಿ ಬಂದಿರುವ ವೈದ್ಯ ವೃತ್ತಿಯನ್ನು ತಲೆಮಾರಿನಿಂದ ತಲೆಮಾರಿಗೆ ತಲುಪಿಸುವ ಜತೆಗೆ ಇದಕ್ಕೊಂದು ಸುಂದರವಾದ ಚೌಕಟ್ಟು ರಚಿಸಿ ಜನಸಾಮಾನ್ಯರಿಗೆ ಚಿಕಿತ್ಸೆ ತಲುಪುವಂತಾಗಬೇಕು. ಈ ಮೂಲಕ ವೈದ್ಯ ಗಿಡಮೂಲಿಕೆಗಳ ವನ ನಿರ್ಮಾಣವಾಗಬೇಕು. ಇದನ್ನು ಸಾಂಪ್ರದಾಯಿಕವಾಗಿ ಅಧ್ಯಯನ ಮಾಡಲು ಶೈಕ್ಷಣಿಕ ಕ್ರಮ ರೂಪಿಸಬೇಕಿದೆ. ಅದಕ್ಕಾಗಿ ಕಾಲೇಜನ್ನು ಆರಂಭಿಸಬೇಕು. ಹೀಗೆ ವಿವಿಧೋದ್ದೇಶ ಯೋಜನೆಗಳಿಗಾಗಿ ಸಿದ್ದರಾಜು ಸ್ವಾಮೀಜಿ ಭೂಮಿ ನೀಡಿರುವುದು ನಮ್ಮ ಶಕ್ತಿ ಹೆಚ್ಚಿಸಿದೆ ಎಂದು ಹೇಳಿದರು.

ಪಾರಂಪರಿಕ ವೈದ್ಯ ಶಂಕರಪ್ಪ ಮಾತನಾಡಿ, ಯಾವುದೇ ಕಾಯಿಲೆ ಇದ್ದರೂ ವಾಸಿ ಮಾಡಲು ಪ್ರಕೃತಿಯಲ್ಲಿ ಒಂದಲ್ಲ ಒಂದು ಗಿಡಮೂಲಿಕೆಗಳಿವೆ. ಅದನ್ನು ಗುರುತಿಸಿ ಹೇಗೆ ಉಪಯೋಗಿಸಿ ಸಮಾಜ ಕಲ್ಯಾಣಕ್ಕೆ ಬಳಸಬೇಕೆಂದು ತಿಳಿಸಲು ಪಾರಂಪರಿಕ ವೈದ್ಯ ದೊಡ್ಡ ಮಾರ್ಗದರ್ಶನ ನೀಡುತ್ತದೆ ಎಂದು ಹೇಳಿದರು.

ಪಾರಂಪರಿಕ ವೈದ್ಯ ಪರಿಷತ್ತಿನ ಖಜಾಂಚಿ ಶಿವಾನಂದ ಜಂಗಿನಮಠ, ಕೆ.ಎಂ ದಯಾನಂದ, ಮೋಹನ್ ಸ್ವಾಮಿ, ವೈದ್ಯ ಪರಿಷತ್ತಿನ ನಿಕಟ ಪೂರ್ವ ಅಧ್ಯಕ್ಷ ಗುರುಸಿದ್ದಪ್ಪ, ಸದಾಶಿವಯ್ಯ, ಸುರೇಶ್, ಶಿವಲಿಂಗಯ್ಯ, ನೀಲಕಂಠ, ಮೆಳೆಕೋಟೆ ಶಿವಣ್ಣ, ನಾಗರಾಜು, ಮುನಿರಾಜು, ಕೃಷ್ಣಪ್ಪ, ಮೊದಲಕೋಟೆ ಹರೀಶ್, ತೀರ್ಥಪ್ರಸಾದ್, ಬಸವರಾಜು ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net