26ರಿಂದ ಮಗ್ಗುಲ ಶ್ರೀಶನೈಶ್ಚರ ದೇಗುಲದಲ್ಲಿ ಶ್ರಾವಣ ಪೂಜೆ

Published on

ವಿರಾಜಪೇಟೆ: ತಾಲೂಕಿನ ಮಗ್ಗುಲ ಶ್ರೀಶನೈಶ್ಚರಸ್ವಾಮಿ ದೇಗುಲದಲ್ಲಿ ಜು.26ರಿಂದ ಶ್ರಾವಣ ಮಾಸದ ವಿಶೇಷ ಪೂಜೆಗಳು ನಡೆಯಲಿವೆ.

ಮಗ್ಗುಲ ಗ್ರಾಮದಲ್ಲಿ ನೆಲೆಗೊಂಡಿರುವ ಶ್ರೀಶನೈಶ್ಚರ ಮತ್ತು ನವಗ್ರಹ ದೇವಾಲಯದಲ್ಲಿ ಶ್ರೀದೇವರಿಗೆ ಶ್ರಾವಣ ಮಾಸದ ವಿಶೇಷ ಪೂಜೆಗಳು ಜು.26ರಿಂದ ಆರಂಭವಾಗಿ ಆ.23ರಂದು ಕೊನೆಯಾಗಲಿದೆ.

ಜು.26ರಂದು ಬೆಳಗ್ಗೆ 6ಗಂಟೆಗೆ ಗಣಪತಿ ಹೋಮದೊಂದಿಗೆ ಶ್ರಾವಣ ಮಾಸದ ಉತ್ಸವ ಆರಂಭವಾಗಲಿದೆ. ಪ್ರಸ್ತುತ ವರ್ಷ ಒಟ್ಟು 5 ಶನಿವಾರಗಳು ಬಂದಿರುವುದು ವಿಶೇಷ. ಶನಿವಾರದ ದಿನಗಳಲ್ಲಿ ದೇಗುಲದಲ್ಲಿ ನವಗ್ರಹ ಪೂಜೆ, ಶನಿಶಾಂತಿ ಪೂಜೆ, ಶನಿಜಪ ಹಾಗೂ ಇತರ ವಿಶೇಷ ಪೂಜೆಗಳು ನಡೆಯಲಿವೆ. ಆಗಮಿಸುವ ಭಕ್ತರಿಗೆ ಶನಿವಾರ ಅನ್ನಸಂತರ್ಪಣೆ ಇರಲಿದೆ. ದೇಗುಲದಲ್ಲಿ ನಡೆಯುವ 5 ವಾರಗಳ ವಿಶೇಷ ಪೂಜಾ ಮಹೋತ್ಸವಕ್ಕೆ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ದೇವರ ಅನುಗ್ರಹ ಪಡೆದುಕೊಳ್ಳುವಂತೆ ದೇಗುಲದ ಆಡಳಿತ ಮಂಡಳಿ ಪ್ರಕಟಣೆಯಲ್ಲಿ ಮನವಿ ಮಾಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net