26 ಸರ್ಕಾರಿ ಶಾಲೆಗಳಿಗೆ ಶುದ್ಧ ನೀರಿನ ಯಂತ್ರ ಕೊಡುಗೆ

26 ಸರ್ಕಾರಿ ಶಾಲೆಗಳಿಗೆ ಶುದ್ಧ ನೀರಿನ ಯಂತ್ರ ಕೊಡುಗೆ
Published on

ಅರಕಲಗೂಡು: ದುಡಿದ ಸಂಪಾದನೆಯಲ್ಲಿ ಗ್ರಾಮೀಣ ಭಾಗದ ಮಕ್ಕಳ ಗುಣಮಟ್ಟದ ಶಿಕ್ಷಣಕ್ಕೆ ಸಹಾಯ ಮಾಡುವುದು ಪುಣ್ಯದ ಕಾಯಕವಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ನಾರಾಯಣ್ ಹೇಳಿದರು.

ತಾಲೂಕಿನ ಹೊನ್ನವಳ್ಳಿ ಗ್ರಾಮದ ರೈತ ಸಂಘದ ಹಿರಿಯ ಹೋರಾಟಗಾರ ದಿ.ಹೊ.ತಿ.ಹುಚ್ಚಪ್ಪ ಅವರು ದತ್ತು ಪಡೆದಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶನಿವಾರ ಏರ್ಪಡಿಸಿದ್ದ ಶುದ್ಧ ಕುಡಿಯುವ ನೀರಿನ ಯಂತ್ರಗಳ ವಿತರಣಾ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.

ಹೊ.ತಿ.ಹುಚ್ಚಪ್ಪ ಅವರ ಮೊಮ್ಮಗ ಶಿವಕುಮಾರ್ ಅವರ ವಿವಾಹ ನ.11ರಂದು ಸರಳವಾಗಿ ನೆರವೇರಲಿದ್ದು, ಅದರ ನೆನಪಿಗಾಗಿ ಕಸಬಾ ಹೋಬಳಿಯ 26 ಸರ್ಕಾರಿ ಶಾಲೆಗಳ ಮಕ್ಕಳ ಆರೋಗ್ಯದ ಹಿತ ದೃಷ್ಟಿಯಿಂದ ಶುದ್ಧ ಕುಡಿಯುವ ನೀರಿನ ಯಂತ್ರಗಳನ್ನು ಕೊಡುಗೆಯಾಗಿ ನೀಡುತ್ತಿರುವುದು ಪುಣ್ಯದ ಕಾರ್ಯವಾಗಿದೆ. ಮಕ್ಕಳ ಶಿಕ್ಷಣಕ್ಕೆ ಕೈ ಜೋಡಿಸುತ್ತಿರುವ ಇವರ ಸೇವೆ ಮುಂದುವರೆಯಲಿ ಎಂದು ಹಾರೈಸಿದರು.

ಶಿಕ್ಷಣ ಸಂಯೋಜಕ ಶಿವಪ್ರಕಾಶ್, ಸಿಆರ್‌ಪಿ ಬಾಲು, ನಯಾಜ್ ಮಾತನಾಡಿದರು. ತಾಪಂ ಮಾಜಿ ಸದಸ್ಯ ಸರೋಜಮ್ಮ, ರತ್ನಮ್ಮ ದೇವರಾಜೇಗೌಡ, ಜಮಾರ್ಧನ್, ಖಂಡೇಶ್ವರ್, ಪುಷ್ಪಾ, ಶಿವಕುಮಾರ್, ಪಲ್ಲವಿ, ಮುಖ್ಯ ಶಿಕ್ಷಕಿ ಲಿಂಗಮ್ಮ, ಸಹ ಶಿಕ್ಷಕ ಲತಾಮಣಿ, ಲೀಲಾ, ನಾಗವೇಣಿ, ಲೋಕೇಶ್ ಇತರರು ಇದ್ದರು. 26 ಶಾಲೆಗಳ ಮುಖ್ಯ ಶಿಕ್ಷಕರಿಗೆ ಶುದ್ಧ ಕುಡಿಯುವ ನೀರಿನ ಯಂತ್ರಗಳನ್ನು ಕೊಡುಗೆಯಾಗಿ ನೀಡಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net