26 ಅಭ್ಯರ್ಥಿಗಳ 34 ನಾಮಪತ್ರ ಕ್ರಮಬದ್ಧ

MLC
Published on

ಕಲಬುರಗಿ: ಈಶಾನ್ಯ ಪದವೀಧರ ಕ್ಷೇತ್ರಕ್ಕೆ ಜೂ.೩ರಂದು ಚುನಾವಣೆ ನಡೆಯಲಿರುವ ಹಿನ್ನೆಲೆಯಲ್ಲಿ ಸಾಮಾನ್ಯ ವೀಕ್ಷಕ ಎಂ.ಮಹೇಶ್ವರರಾವ್ ಸಮ್ಮುಖದಲ್ಲಿ ಶುಕ್ರವಾರ ನಾಮಪತ್ರ ಪರಿಶೀಲನೆ ಕಾರ್ಯ ನಡೆದಿದ್ದು, ೨೬ ಅಭ್ಯರ್ಥಿಗಳ ೩೪ ನಾಮಪತ್ರ ಪುರಸ್ಕೃತವಾಗಿದ್ದು, ಏಳು ತಿರಸ್ಕೃತಗೊಂಡಿವೆ ಎಂದು ಚುನಾವಣಾಧಿಕಾರಿ ಕೃಷ್ಣ ಬಾಜಪೇಯಿ ತಿಳಿಸಿದ್ದಾರೆ.
ಬಿಜೆಪಿಯ ಅಮರನಾಥ ನೀಲಕಂಠ ಪಾಟೀಲ್, ಕಾಂಗ್ರೆಸ್‌ನ ಚಂದ್ರಶೇಖರ ಬಸವರಾಜ, ಪಕ್ಷೇತರರಾದ ಅನಿಮೇಶ ಮಹಾರುದ್ರಪ್ಪ, ಅಬ್ದುಲ್ ಜಬ್ಬಾರ್ ಅಬ್ದುಲ್ ರೆಹಮಾನ್ ಗೋಳಾ, ಕಾಶಿನಾಥ ಎಂ., ಗವಿಸಿದ್ದಪ್ಪ, ಎನ್.ಪ್ರತಾಪರೆಡ್ಡಿ, ಪ್ರಭು, ಬಸವರಾಜ, ಮಲ್ಲಿಕಾರ್ಜುನ ಧುತ್ತರಗಾಂವ, ಮಹೆಬೂಬ್, ಮೊಹಮ್ಮದ್ ಹುಸೇನ್, ರಾಜು, ರಿಯಾಜ್ ಅಹ್ಮದ್, ವಿಲಾಸ, ಶರಣಬಸಪ್ಪ, ಶರಣಬಸಪ್ಪ ಎಸ್.ಎ., ಶಶಿಧರ, ಶಿವಕುಮಾರ, ಎನ್.ಶೈಲಜಾ ರೆಡ್ಡಿ, ಸತೀಶಕುಮಾರ, ಸಾಯಿನಾಥ, ನಾಗೇಶ್ವರ, ಸುನೀಲಕುಮಾರ, ಸುರೇಶ ಹಾಗೂ ಸುರೇಶ ತಂದೆ ರಾಜಶೇಖರಪ್ಪ ನಾಮಪತ್ರ ಸ್ವೀಕೃತವಾಗಿವೆ.
೨೯ ಅಭ್ಯರ್ಥಿಗಳಿಂದ ೪೧ ನಾಮಪತ್ರ ಸಲ್ಲಿಕೆಯಾಗಿದ್ದವು. ವಾಪಸ್ ಪಡೆಯಲು ಮೇ ೨೦ ಕೊನೆಯ ದಿನ. ಮಹೇಶ್ವರರಾವ್ ಸಾಮಾನ್ಯ ವೀಕ್ಷಕ ಹಿರಿಯ ಐಎಎಸ್ ಅಧಿಕಾರಿ ಎಂ.ಮಹೇಶ್ವರರಾವ್ ಅವರನ್ನು ಚುನಾವಣಾ ಆಯೋಗ ಈಶಾನ್ಯ ಪದವೀಧರ ಕ್ಷೇತ್ರದ ಸಾಮಾನ್ಯ ವೀಕ್ಷಕರಾಗಿ ನಿಯೋಜಿಸಿದೆ. ಅವರ ಮೊ.೮೮೯೨೭ ೬೯೯೭೫ ಇದ್ದು, ಸಾರ್ವಜನಿಕರು ಕ್ಷೇತ್ರದ ಚುನಾವಣೆಗೆ ಸಂಬAಧಿಸಿದAತೆ ಅಹವಾಲು ಸಲ್ಲಿಸಬಹುದು ಎಂದು ಕೃಷ್ಣ ಬಾಜಪೇಯಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net