

ಶಿಗ್ಗಾಂವಿ: ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಶಿಗ್ಗಾಂವಿ ಶಾಖೆಯ ಪದಾಧಿಕಾರಿಗಳಿಂದ ಶನಿವಾರ ಪಟ್ಟಣದಲ್ಲಿ ಸ್ವಾತಂತ್ರ್ಯೊತ್ಸವದ ಅಂಗವಾಗಿ 250 ಮೀಟರ್ ಉದ್ದದ ತ್ರಿವರ್ಣ ಧ್ವಜದ ಮೂಲಕ ತಿರಂಗಾ ಯಾತ್ರೆ ನಡೆಸಲಾಯಿತು.
ಗಂಗೇಬಾವಿ ಕ್ರಾಸ್ನಲ್ಲಿ ಭಾರತಾಂಬೆಯ ಭಾವಚಿತ್ರಕ್ಕೆ ಗಂಜಿಗಟ್ಟಿ ಚರ್ಮತೇಶ್ವರ ಮಠದ ವೈಜಿನಾಥ ಶಿವಲಿಂಗೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು ಪುಷ್ಪಾರ್ಚನೆ ಸಲ್ಲಿಸುವ ಮೂಲಕ ಯಾತ್ರೆಯ ಮೆರವಣಿಗೆಗೆ ಚಾಲನೆ ನೀಡಿದರು. ಹಳೇ ಬಸ್ ನಿಲ್ದಾಣ ಮಾರ್ಗವಾಗಿ ರಾಣಿ ಚನ್ನಮ್ಮ ಸರ್ಕಲ್ ಮೂಲಕ ಹಳೇ ಪೇಟೆಯಿಂದ ತಾಲೂಕು ಕ್ರೀಡಾಂಗಣದಲ್ಲಿ ತ್ರಿವರ್ಣ ಧ್ವಜದ ತಿರಂಗಾ ಯಾತ್ರೆ ಸಂಪನ್ನಗೊಂಡಿತು.
ವಿದ್ಯಾರ್ಥಿ ಪರಿಷತ್ ಜಿಲ್ಲಾ ಸಂಚಾಲಕ ಕಿರಣ ಕಮ್ಮಾರ, ಶಿವಾನಂದ ದೊಡ್ಮನಿ, ಗಣೇಶ ಕಮಡೊಳ್ಳಿ, ಸಾಯಿಕುಮಾರ ಮಾಹೂರ, ಸಚಿನ ಮಡಿವಾಳರ, ಬಸವರಾಜ ಕಲ್ಲಪ್ಪನವರ, ಬಸವರಾಜ ಬಾರಕೇರ, ವಿನಾಯಕ ಅಂಗಡಿ, ಚಂದ್ರಶೇಖರ ಕಮಡೊಳ್ಳಿ, ಪ್ರತೀಕ ಕೋಳೆಕರ, ಗಂಗಾಧರ ಕುಲಕರ್ಣಿ, ಅನುಶಾ ಮುದಿನಾಯಕ, ವಿನಾಯಕ ಚಿಕ್ಕಗೌಡ್ರ, ವಿವಿಧ ಕಾಲೇಜ್ಗಳ ವಿದ್ಯಾರ್ಥಿಗಳು ಭಾಗಿಯಾಗಿದ್ದರು.