

ಬೆಂಗಳೂರು: ನಗರದ ದೇವರ ಜೀವನಹಳ್ಳಿ(ಡಿ.ಜೆ.ಹಳ್ಳಿ)ಯಲ್ಲಿ ಪೊಲೀಸ್ ಠಾಣೆ ಪಕ್ಕದಲ್ಲೇ ಅಕ್ರಮ ಕಸಾಯಿ ಖಾನೆ ನಡೆಸುತ್ತಿದ್ದುದನ್ನು ಗೌ ಗ್ಯಾನ್ ಫೌಂಡೇಶನ್ ಬೆಳಕಿಗೆ ತಂದಿದೆ. ವಿಜಯದಶಮಿ ದಿನದಂದೇ ಕಾನೂನುಬಾಹಿರವಾಗಿ 25 ಗೋವುಗಳ ಕಟಾವು ಮಾಡಿರುವ ಮಾಹಿತಿ ಹೊರಬಿದ್ದಿದೆ.
ಡಿಜೆ ಹಳ್ಳಿ ಠಾಣೆ ಪಕ್ಕದ ಗಲ್ಲಿಯಲ್ಲಿರುವ ಕಸಾಯಿಖಾನೆ ಮೇಲೆ ಗೌ ಗ್ಯಾನ್ ಫೌಂಡೇಷನ್ ಇಂದು ಬೆಳಿಗ್ಗೆ ದಾಳಿ ನಡೆಸಿದ್ದು, ಕಟಾವಿಗಾಗಿ ಕಟ್ಟಿಹಾಕಿದ್ದ ನಾಲ್ಕು ಗೋವುಗಳನ್ನು ರಕ್ಷಿಸಿದ್ದಾರೆ. ಕಸಾಯಿಖಾನೆಯನ್ನು ಪರಿಶೀಲಿಸಿ, ಸಿಬ್ಬಂದಿಯ ವಿಚಾರಣೆ ನಡೆಸಿದಾಗ ಸುಮಾರು 25 ಗೋವುಗಳನ್ನು ಕಡಿದು ಮಾಂಸವನ್ನು ಸಾಗಿಸಿರುವುದು ತಿಳಿದುಬಂದಿದೆ.
ಡಿಜೆ ಹಳ್ಳಿ ಪೊಲೀಸರು ಪ್ರಕರಣ ದಾಖಲಿಸಿದ್ದು, ರಕ್ಷಿಸಲ್ಪಟ್ಟ ಗೋವುಗಳನ್ನು ಪೊಲೀಸ್ ವಶಕ್ಕೊಪ್ಪಿಸಲಾಗಿದೆ.