More

    ರೈತಪ್ರತಿಭಟನೆ ಸ್ಥಳದಲ್ಲಿ ಯುವಕನ ಶವ; ಕೈಕಾಲು ತುಂಡರಿಸಿ ದೇಹವನ್ನು ನೇತುಹಾಕಿದ್ದರು!

    ಸೋನಿಪತ್​: ಕೃಷಿ ಕಾನೂನುಗಳ ವಿರುದ್ಧ ಪ್ರತಿಭಟಿಸುತ್ತಿರುವ ರೈತರ ಪ್ರತಿಭಟನೆಯ ಕೇಂದ್ರವಾಗಿರುವ ದೆಹಲಿ-ಹರಿಯಾಣ ನಡುವಿನ ಸಿಂಘು ಗಡಿಯಲ್ಲಿ ಭೀಕರ ಘಟನೆಯೊಂದು ಬೆಳಕಿಗೆ ಬಂದಿದೆ. ಇಂದು(ಅ.15) ಬೆಳಗಿನ ಜಾವ, ಕೈಕಾಲು ತುಂಡರಿಸಲ್ಪಟ್ಟ ಯುವಕನೊಬ್ಬನ ಶವವು ಪೊಲೀಸ್​ ಬ್ಯಾರಿಕೇಡಿಗೆ ನೇತು ಹಾಕಿದ ಸ್ಥಿತಿಯಲ್ಲಿ ಸಿಕ್ಕಿದೆ.

    ರೈತರ ಪ್ರತಿಭಟನೆಯ ಮುಖ್ಯ ವೇದಿಕೆಗೆ ಸ್ವಲ್ಪ ದೂರದಲ್ಲೇ ರಕ್ತದ ಮಡುವಿನಲ್ಲಿ ಈ ಶವ ಸಿಕ್ಕಿರುವುದು ಉದ್ರಿಕ್ತ ವಾತಾವರಣ ಉಂಟುಮಾಡಿದೆ. ಈ ಕ್ರೌರ್ಯಯುತ ಕೊಲೆಗೆ ‘ನಿಹಾಂಗ್​’ ಎಂಬ ಸಿಖ್​ ಯೋಧರ ಗುಂಪು ಕಾರಣವಾಗಿದೆ ಎಂದು ರೈತಮುಖಂಡರು ಆರೋಪಿಸಿದ್ದಾರೆ. ಹರಿಯಾಣದ ಸೋನಿಪತ್​ ಜಿಲ್ಲೆಯ ಕುಂಡ್ಲಿ ಪೊಲೀಸ್​ ಠಾಣೆ ವ್ಯಾಪ್ತಿಗೆ ಸಲ್ಲುವ ಘಟನಾ ಸ್ಥಳದಲ್ಲಿ ಹರಿಯಾಣ ಪೊಲೀಸರು ತನಿಖೆ ಆರಂಭಿಸಿದ್ದಾರೆ.

    ಇದನ್ನೂ ಓದಿ: ಆಯುಧಪೂಜೆ ಹಬ್ಬದ ರಾತ್ರಿಯೇ ಮಾರಕಾಸ್ತ್ರಗಳಿಂದ ಕೊಚ್ಚಿ ಯುವಕನ ಕೊಲೆ! ಬೆಚ್ಚಿಬಿದ್ದ ಸ್ಥಳೀಯರು

    ಕೊಲೆಯಾದ ಸುಮಾರು 35 ವರ್ಷ ವಯಸ್ಸಿನ ವ್ಯಕ್ತಿ ಯಾರು ಎಂದು ಇನ್ನೂ ಮಾಹಿತಿ ಹೊರಬಿದ್ದಿಲ್ಲ. ಆರಂಭಿಕವಾಗಿ ಪೊಲೀಸರು ಸ್ಥಳಕ್ಕೆ ಪ್ರವೇಶಿಸಲು ಪ್ರತಿಭಟನಾನಿರತ ರೈತರು ಅಡ್ಡಿಪಡಿಸಿದರೂ, ತದನಂತರ ಸ್ಥಳಪರಿಶೀಲನೆಗೆ ಅವಕಾಶ ನೀಡಿದರು. ಶವವನ್ನು ಹತ್ತಿರದ ಸರ್ಕಾರಿ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗಾಗಿ ಕೊಂಡೊಯ್ಯಲಾಯಿತು ಎಂದು ವರದಿಗಳು ತಿಳಿಸಿವೆ.

    ಈ ಸ್ಥಳದಲ್ಲಿ ರೈತರ ಪ್ರತಿಭಟನೆಯ ನೇತೃತ್ವ ವಹಿಸಿರುವ 40 ರೈತ ಸಂಘಟನೆಗಳ ಒಕ್ಕೂಟವಾದ ಸಂಯುಕ್ತ ಕಿಸಾನ್ ಮೋರ್ಚಾ ಈ ಪ್ರಕರಣಕ್ಕೂ ತಮಗೂ ಏನೂ ಸಂಬಂಧವಿಲ್ಲ ಎಂದಿದ್ದು, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲು ಹರಿಯಾಣ ಸರ್ಕಾರದೊಂದಿಗೆ ಪೂರ್ಣ ರೀತಿಯಲ್ಲಿ ಸಹಕರಿಸುವುದಾಗಿ ಹೇಳಿದೆ. “ನಿಹಾಂಗರು ಈ ಪ್ರಕರಣದ ಹಿಂದಿದ್ದಾರೆ. ಅವರೇ ಒಪ್ಪಿಕೊಂಡಿದ್ದಾರೆ. ನಿಹಾಂಗರು ನಮಗೆ ಮೊದಲಿನಿಂದ ತೊಂದರೆ ಮಾಡುತ್ತಲೇ ಬಂದಿದ್ದಾರೆ” ಎಂದು ಕಿಸಾನ್​ ಮೋರ್ಚಾದ ನಾಯಕ ಬಲ್​ಬೀರ್​ ಸಿಂಗ್​ ರಾಜೇವಾಲ್​ ಇಂಡಿಯಾ ಟುಡೇಗೆ ಹೇಳಿಕೆ ನೀಡಿದ್ದಾರೆ.

    ಇದನ್ನೂ ಓದಿ: ದಾಖಲೆಯಲ್ಲಿ ಹೆಣ್ಣು-ನೀಡಿರುವುದು ಗಂಡು ಮಗು; ಲೇಡಿಗೋಷನ್‌ ಆಸ್ಪತ್ರೆ ವಿರುದ್ಧ ಆರೋಪ

    ಕೃಷಿಕಾನೂನುಗಳ ವಿರುದ್ಧ ಪ್ರತಿಭಟನೆಗಾಗಿ ಒಂದು ವರ್ಷದಿಂದ ದೆಹಲಿ ಗಡಿಗಳಲ್ಲಿ ರೈತ ಮುಖಂಡರು ಗುಂಪುಗಟ್ಟಿರುವುದು ಎಷ್ಟು ಸರಿ ಎಂದು ಸುಪ್ರೀಂ ಕೋರ್ಟ್​ ಪ್ರಶ್ನಿಸಿದ ಬೆನ್ನಲ್ಲೇ ಈ ಹಿಂಸಾತ್ಮಕ ಘಟನೆ ನಡೆದಿದೆ. ಈ ಘಟನೆಯಿಂದ, ಕಳೆದ ಜನವರಿಯಲ್ಲಿ ರೈತಪ್ರತಿಭಟನೆಯ ಹೆಸರಲ್ಲಿ ದೆಹಲಿಯ ಕೆಂಪುಕೋಟೆ ಆವರಣದಲ್ಲಿ ನಡೆದ ಹಿಂಸಾಚಾರದ ನೆನಪುಗಳು ಮರುಕಳಿಸಿವೆ. (ಏಜೆನ್ಸೀಸ್)

    ‘ಕಲೆಕ್ಷನ್​ ಗಿರಾಕಿ’ ಕಾಮೆಂಟಿಗೆ ‘ಡಿಕೆಶಿಗೆ ಇಂಥ ಪ್ರಕರಣಗಳು ಹೊಸದೇನೂ ಅಲ್ಲ’ ಎಂದ ಸಚಿವೆ ಶೋಭಾ ಕರಂದ್ಲಾಜೆ

    ಬಾಂಬ್​ ಭೀತಿ ಮೂಡಿಸಿದ್ದ ಸೂಟ್​ಕೇಸ್​ಗಳು! ಒಳಗಿದ್ದದ್ದು ಏನು ಗೊತ್ತಾ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts