23ರಂದು ಸರ್ವ ಸದಸ್ಯರ ಸಭೆ

Published on

ಹೊಳೆನರಸೀಪುರ: ಪಟ್ಟಣದ ಶ್ರೀ ಶಿವಕುಮಾರ ಸ್ವಾಮೀಜಿ ಸಹಕಾರ ಸಂಘದ 2025-26ನೇ ಸಾಲಿನ ಸರ್ವ ಸದಸ್ಯರ ಸಭೆಯನ್ನು ಆ.23ರಂದು ಬೆಳಗ್ಗೆ 10 ಗಂಟೆಗೆ ಆಯೋಜಿಸಲಾಗಿದೆ ಎಂದು ಸಂಘದ ಅಧ್ಯಕ್ಷ ಎಚ್.ಆರ್.ಸುರೇಶ್ ತಿಳಿಸಿದರು.

ಪಟ್ಟಣದ ಬಸವ ಭವನದ ಕಟ್ಟಡದಲ್ಲಿರುವ ಶ್ರೀ ಶಿವಕುಮಾರ ಸ್ವಾಮೀಜಿ ಸಹಕಾರ ಸಂಘದಲ್ಲಿ 1189ಷೇರುದಾರರು ಇದ್ದಾರೆ. ಸಂಘದ ನಿಯಮದ ಪ್ರಕಾರ ಒಬ್ಬ ಷೇರುದಾರ 5 ವರ್ಷದ ಅವಧಿಯಲ್ಲಿ ಕನಿಷ್ಠ 2 ಸಭೆಗೆ ಕಡ್ಡಾಯವಾಗಿ ಹಾಜರಿರಬೇಕು ಹಾಗೂ ಕನಿಷ್ಠ 10 ಸಾವಿರ ರೂ.ಗಳ ವಹಿವಾಟು ನಡೆಸಿರಬೇಕು. ಆಗ ಮಾತ್ರ ಸಂಘದ ಚುನಾವಣೆಯಲ್ಲಿ ಪ್ರತಿನಿಧಿಸಲು ಹಾಗೂ ಮತದಾನ ಮಾಡಲು ಅವಕಾಶವಿದೆ. ಆದ್ದರಿಂದ ಎಲ್ಲರೂ ಸಂಘದ ನಿಯಮ ಪಾಲನೆ ಮಾಡಬೇಕು ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಸಂಘದಲ್ಲಿ ನಿಶ್ಚಿತ ಠೇವಣಿಗೆ ಶೇ.9 ಬಡ್ಡಿ, ಪಿಗ್ಮಿಗೆ ಶೇ.7 ಸಾಮಾನ್ಯ ಬಡ್ಡಿ ನೀಡಲಾಗುತ್ತದೆ. ವೈಯಕ್ತಿಕ ಮತ್ತು ಅಡಮಾನ ಸಾಲಕ್ಕೆ ವಾರ್ಷಿಕ ಶೇ.18 ಬಡ್ಡಿ ದರದಲ್ಲಿ ನಿಯಮಾನುಸಾರ ಪರಿಶೀಲನೆ ನಡೆಸಿ, ನಿರ್ದೇಶಕರ ಒಪ್ಪಿಗೆ ಪಡೆದು ಸಾಲ ನೀಡಲಾಗುತ್ತದೆ ಎಂದು ಮಾಹಿತಿ ನೀಡಿದರು.

ಉಪಾಧ್ಯಕ್ಷ ಪ್ರಕಾಶ್, ನಿರ್ದೇಶಕರಾದ ಎಚ್.ಎಸ್.ಪ್ರಭಶಂಕರ್, ಎಂ.ಈ.ದೇವರಾಜು, ಬಿ.ಎನ್.ಮಂಜುನಾಥ್, ಟಿ.ರವಿ ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಂ.ಬಿ.ಚೇತನ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net