7 ಸಾವಿರ ಗಡಿಯತ್ತ ಕರೊನಾ ಸಂಖ್ಯೆ

carona logo
Published on

ವಿಜಯವಾಣಿ ಸುದ್ದಿಜಾಲ ಹಾವೇರಿ

ಆರೋಗ್ಯ ಇಲಾಖೆಯ 8 ನೌಕರರು ಸೇರಿ ಜಿಲ್ಲೆಯಲ್ಲಿ ಸೋಮವಾರ 220 ಜನರಿಗೆ ಕರೊನಾ ದೃಢಪಟ್ಟಿದೆ. 193 ಜನರು ಗುಣವಾಗಿದ್ದು, ಇಬ್ಬರು ಮೃತಪಟ್ಟಿದ್ದಾರೆ ಎಂದು ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ ತಿಳಿಸಿದ್ದಾರೆ.

ಜಿಲ್ಲೆಯಲ್ಲಿ ಈವರೆಗೆ 6,992 ಪಾಸಿಟಿವ್ ಪ್ರಕರಣಗಳು ದೃಢಪಟ್ಟಿವೆ. 5,097 ಜನರು ಸೋಂಕಿನಿಂದ ಗುಣವಾಗಿ ಬಿಡುಗಡೆ ಹೊಂದಿದ್ದಾರೆ. 132 ಜನರು ಮೃತಪಟ್ಟಿದ್ದಾರೆ. 1,763 ಸಕ್ರಿಯ ಪ್ರಕರಣಗಳಿದ್ದು, ಅದರಲ್ಲಿ 1,249 ಸೋಂಕಿತರು ಹೋಂ ಐಸೋಲೇಷನ್ ಹಾಗೂ 514 ಸೋಂಕಿತರು ಕೋವಿಡ್ ಕೇರ್ ಆಸ್ಪತ್ರೆ, ಕೋವಿಡ್ ಕೇರ್​ಹೆಲ್ತ್ ಸೆಂಟರ್, ಕೋವಿಡ್ ಕೇರ್ ಸೆಂಟರ್​ಗಳಲ್ಲಿ ಚಿಕಿತ್ಸೆಗೆ ದಾಖಲಾಗಿದ್ದಾರೆ.

ತಾಲೂಕುವಾರು ವಿವರ: ಹಾವೇರಿ ತಾಲೂಕಿನಲ್ಲಿ 66, ಹಿರೇಕೆರೂರ 41, ರಾಣೆಬೆನ್ನೂರ 40, ಶಿಗ್ಗಾಂವಿ 26, ಬ್ಯಾಡಗಿ 21, ಹಾನಗಲ್ಲ 17, ಸವಣೂರ ತಾಲೂಕಿನಲ್ಲಿ 8 ಹಾಗೂ ಇತರೆ ಒಬ್ಬರಿಗೆ ಸೋಮವಾರ ಸೋಂಕು ದೃಢಪಟ್ಟಿದೆ.

ಸೋಂಕಿನಿಂದ ಗುಣವಾಗಿ ಸೋಮವಾರ ಹಾವೇರಿ ತಾಲೂಕಿನ 86, ಹಾನಗಲ್ಲ 40, ಹಿರೇಕೆರೂರ 29, ಸವಣೂರ 17, ಶಿಗ್ಗಾಂವಿ 13, ಬ್ಯಾಡಗಿ ಹಾಗೂ ರಾಣೆಬೆನ್ನೂರಿನ ತಲಾ ಒಬ್ಬರು, ಇತರೆ 6 ಜನರು ಬಿಡುಗಡೆ ಹೊಂದಿದ್ದಾರೆ.

ಮೃತರ ಮಾಹಿತಿ: ಸವಣೂರ ತಾಲೂಕು ಚಿಲ್ಲೂರಬಡ್ನಿ ಗ್ರಾಮದ 60 ವರ್ಷದ ವೃದ್ಧ ಉಸಿರಾಟ ಸಮಸ್ಯೆಯಿಂದ ಸೆ. 10ರಂದು ಸವಣೂರ ಆಸ್ಪತ್ರೆಗೆ ದಾಖಲಾಗಿದ್ದರು. ಅಂದೇ ರ್ಯಾಪಿಡ್ ಟೆಸ್ಟ್ ಮಾಡಿದಾಗ ಪಾಸಿಟಿವ್ ದೃಢಪಟ್ಟಿತ್ತು. ಸೆ. 14ರಂದು ಮೃತಪಟ್ಟಿದ್ದಾರೆ. ಹಾವೇರಿ ತಾಲೂಕು ನೀರಲಗಿ ಗ್ರಾಮದ 70 ವರ್ಷದ ವೃದ್ಧ ಸೆ. 5ರಂದು ಜಿಲ್ಲಾ ಕೋವಿಡ್ ಆಸ್ಪತ್ರೆಗೆ ದಾಖಲಾಗಿದ್ದರು. ತೀವ್ರ ಉಸಿರಾಟ ತೊಂದರೆಯಿಂದ ಬಳಲುತ್ತಿದ್ದ ಅವರು ಸೆ. 13ರಂದು ಮೃತಪಟ್ಟಿದ್ದಾರೆ. ಇವರಿಬ್ಬರ ಮರಣವನ್ನು ಸೋಮವಾರ ದೃಢೀಕರಿಸಲಾಗಿದ್ದು, ಕೋವಿಡ್ ನಿಯಮಾನುಸಾರ ಅಂತ್ಯಸಂಸ್ಕಾರ ನೆರವೇರಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net